ಬೆಂಗಳೂರು : ಐಟಿ ದಾಳಿ ಹಾಗೂ ಲೋಡ್ ಶೆಡ್ಡಿಂಗ್ ಸಂಬಂಧಿಸಿದಂತೆ ಮಾಜಿ ಸಚಿವ ಆರ್. ಅಶೋಕ್ ಲೇವಡಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ದುಡ್ಡು ಸಾಗಿಸೋಕೆ ಅಂತ ಕರೆಂಟ್ ತೆಗೆಯುತ್ತಾ ಇದ್ದಾರೆ ಅನಿಸುತ್ತದೆ ಎಂದು ಕುಟುಕಿದ್ದಾರೆ.
ಈ ಕತ್ತಲೆ ಭಾಗ್ಯ ಯಾಕೆ ಅಂದರೆ, ಕತ್ತಲೆ ಭಾಗ್ಯದಲ್ಲಿ ಕಾಂಚನಾದ ಆಟ ಆಡೋಕ್ಕೆ ಇವರು ಲೋಡ್ ಶೆಡ್ಡಿಂಗ್ ಮಾಡಿದ್ದಾರೆ. ಅಕ್ಕ ಪಕ್ಕದವರು ಹಣ ಸಾಗಿಸೋದು ನೋಡಬಾರದು ಅಂತ ಮೊದಲೇ ಕರೆಂಟ್ ತೆಗೆಯುತ್ತಾ ಇದ್ದಾರೆ ಅನಿಸತ್ತೆ ಎಂದು ವ್ಯಂಗ್ಯವಾಡಿದ್ದಾರೆ.
ಚಿನ್ನಾಭರಣ ಇನ್ನು ಲೆಕ್ಕ ಹಾಕಬೇಕಿದೆ
ನಿನ್ನೆ ಬೆಂಗಳೂರೇ ಬೆಚ್ಚಿ ಬೀಳುವ ಸುದ್ದಿ ಆಗಿದೆ. ಈ ಸರ್ಕಾರ ಬಂದ ಮೇಲೆ ಒಂದಿಲ್ಲೊಂದು ಭ್ರಷ್ಟಾಚಾರ ಆರೋಪ ಹೊತ್ತಿದೆ. ಈ ಸರ್ಕಾರ ATM ಸರ್ಕಾರ ಅಂತ ಹೇಳಿದ್ವಿ ನಾವು. ಅದಕ್ಕೆ ಸಾಕ್ಷಿ ಕೇಳಿದ್ರು, ಈಗ ಸಾಕ್ಷಿ ಸಿಕ್ಕಿದೆ. ಅಂಬಿಕಾಪತಿ ಮನೆಯಲ್ಲಿ 42 ಕೋಟಿಗೂ ಅಧಿಕ ಹಣ ಸಿಕ್ಕಿದೆ. ಚಿನ್ನಾಭರಣ ಇನ್ನು ಲೆಕ್ಕ ಹಾಕಬೇಕಿದೆ. ಅಂಬಿಕಾಪತಿ ಪತ್ನಿ ಕಾಂಗ್ರೆಸ್ ಕಾರ್ಪೊರೇಟ್. ಅಂಬಿಕಾಪತಿ ಮನೆಯಲ್ಲಿ ಸಿಕ್ಕ ಹಣದ ಮೂಲ ತಿಳಿಯಲು ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.