ಬೆಂಗಳೂರು : ಕಿವೀಸ್ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾ ಹುಲಿಗಳು ಸಾಧಾರಣ ಟಾರ್ಗೆಟ್ ಕಲೆಹಾಕಿದ್ದಾರೆ.
ಚೆನ್ನೈನಲ್ಲಿ ನಡೆಯುತ್ತಿರುವ ವಿಶ್ವಕಪ್-2023 ಟೂರ್ನಿಯ 11ನೇ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ಗೆ ಇಳಿದ ಬಾಂಗ್ಲಾದೇಶ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೋಂಡು 245 ರನ್ ಗಳಿಸಿತು.
ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾಗೆ ಕಿವೀಸ್ ಬೌಲರ್ಗಳು ಶಾಕ್ ನೀಡಿದರು. ಲಿಟ್ಟನ್ ದಾಸ್ ಶೂನ್ಯ ಸುತ್ತಿ ಪೆವಿಲಿಯನ್ನತ್ತ ಮುಖ ಮಾಡಿದರು. ಬಳಿಕ ಶಕೀಬ್ ಅಲ್ ಹಸನ್ ಹಾಗೂ ಮುಶ್ಫಿಕರ್ ರಹೀಮ್ ಸಂಕಷ್ಟದಲ್ಲಿದ್ದ ಬಾಂಗ್ಲಾದೇಶಕ್ಕೆ ಆಸರೆಯಾದರು.
ಬಾಂಗ್ಲಾ ಪರ ಮುಶ್ಫಿಕರ್ ರಹೀಮ್ (66) ಅರ್ಧಶತಕ ಸಿಡಿಸಿದರೆ, ನಾಯಕ ಶಕೀಬ್ ಅಲ್ ಹಸನ್ 40 ರನ್ ಗಳಿಸಿದರು. ಮೆಹಿದಿ ಹಸನ್ ಮಿರಾಜ್ 30, ಮಹಮ್ಮದುಲ್ಲಾ ಅಜೇಯ 41* ರನ್ ಗಳಿಸಿ ತಂಡ 240 ರನ್ ಗಡಿದಾಟುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕಿವೀಸ್ ಪರ ಫರ್ಗುಸನ್ 3, ಬೌಲ್ಟ್ ಹಾಗೂ ಹೆಬ್ರಿ ತಲಾ 2, ಸ್ಯಾಂಟ್ನರ್ ಹಾಗೂ ಫಿಲಿಪ್ಸ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.