Tuesday, November 5, 2024

ಅಯೋಧ್ಯೆ ರಾಮಮಂದಿರಕ್ಕೆ 15 ಕೆ.ಜಿ ಬೆಳ್ಳಿ ಇಟ್ಟಿಗೆ ಸಮರ್ಪಣೆ!

ದಾವಣಗೆರೆ : ಅಯೋದ್ಯೆಯ ಶ್ರೀ ರಾಮ ಮಂದಿರಕ್ಕೆ ಬೆಣ್ಣೆನಗರಿ ದಾವಣಗೆರೆಯಿಂದ 15 ಕೆ.ಜಿ ತೂಕದ ಬೆಳ್ಳಿ ಇಟ್ಟಿಗೆ ಸಮರ್ಪಣೆ ಮಾಡಲಾಯಿತು.

ದಾವಣಗೆರೆಯ ರೇಣುಕಾ ಮಂದಿರದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಸಿ.ಟಿ ರವಿ, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾದವ್ ನೇತೃತ್ವದಲ್ಲಿ ಸುಮಾರು 15 ಕೆ.ಜಿ ಗಾತ್ರದ ಬೆಳ್ಳಿ ಇಟ್ಟಿಗೆಯನ್ನು ಶ್ರೀರಾಮ ಮಂದಿರಕ್ಕೆ ಸಮರ್ಪಣೆ ಮಾಡಲಾಯಿತು.

ಇದನ್ನೂ ಓದಿ: ಮೆಟ್ರೋದಲ್ಲಿ ಮೂರ್ಛೆ ಬಂದಂತೆ ನಟನೆ : ಪ್ರಾಂಕ್ ಮಾಡಿದವನಿಗೆ 500 ದಂಡ, ಪ್ರಕರಣ ದಾಖಲು

1990ರಲ್ಲಿ ದಾವಣಗೆರೆಗೆ ಆಗಮಿಸಿದ್ದ ಶ್ರೀರಾಮ ಜ್ಯೋತಿ ಯಾತ್ರೆ ವೇಳೆ ಉಂಟಾದ ಘರ್ಷಣೆಯಲ್ಲಿ
ಎಂಟು ಜನರ ಬಲಿದಾನ, 70 ಜನರಿಗೆ ಗಂಭೀರ ಗಾಯಗಳಾಗಿತ್ತು, ಬಲಿಯಾದ ಎಂಟು ಮಂದಿ ನೆನಪಿಗಾಗಿ ಬೆಳ್ಳಿ ಇಟ್ಟಿಗೆಯನ್ನು  ನೀಡಲಾಯಿತು.

ಈ ಇಟ್ಟಿಗೆ ಮೇಲೆ ಶ್ರೀರಾಮನ ಚಿತ್ರದ ಜೊತೆ ಬಲಿಯಾದ ಎಂಟು ಮಂದಿ ಹೆಸರುಗಳನ್ನು ಕೆತ್ತಿ ಅಯೋಧ್ಯೆ ಶ್ರೀರಾಮಮಂದಿರ ನಿರ್ಮಾಣಕ್ಕೆ ಬಳಕೆ ಮಾಡಲು ಬೆಳ್ಳಿ ಇಟ್ಟಿಗೆ ನೀಡಲಾಯಿತು.

ಈ ಸಂರ್ಭದಲ್ಲಿ ಹೆಬ್ಬಾಳ್ ಶ್ರೀ ಸಾನಿಧ್ಯ, ಸಂಸದ ಜಿಎಂ ಸಿದ್ದೇಶ್ವರ್, ಶಾಸಕ ಬಿಪಿ ಹರೀಶ್, ಬೆಳ್ಳಿ ಪ್ರಕಾಶ್, ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ಮತ್ತಿತರರು ಭಾಗಿಯಾಗಿದ್ದರು.

 

RELATED ARTICLES

Related Articles

TRENDING ARTICLES