ಬೆಂಗಳೂರು: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ ವಂಚಿಸಿದ್ದ ಚೈತ್ರಾ ಆ್ಯಂಡ್ ಗ್ಯಾಂಗ್ ವಿರುದ್ಧದ ತನಿಖೆ ಮುಂದುವರಿದಿದೆ. ಸಿಸಿಬಿ ಟೀಂ ತನಿಖೆ ನಡೆಸುತ್ತಿದೆ.
ವಂಚಕಿ ಚೈತ್ರಾ ಅರೆಸ್ಟ್ ಆಗಿದ್ದರ ಹಿಂದೆ ರೋಚಕ ಕಥೆಯೇ ಇದೆ. ಚೈತ್ರಾ ವಿರುದ್ಧ ಪ್ರಕರಣ ದಾಖಲಾಗ್ತಿದ್ದಂತೆ ಚೈತ್ರಾಳ ಚಲನ-ವಲನದ ಬಗ್ಗೆ ಸಿಸಿಬಿ ಕಣ್ಣಿಟ್ಟಿತ್ತು. ಚೈತ್ರಾ ಬಂಧನಕ್ಕೆ ಸಿಸಿಬಿ ಟೀಂ ಹಿಂದುತ್ವದ ಮೊರೆ ಹೋಗಿತ್ತು. ಚೈತ್ರಾ ಯಾರ್ಯಾರ ಸಂಪರ್ಕದಲ್ಲಿದ್ದಳು ಎಲ್ಲೆಲ್ಲಿ ಹೋಗುತ್ತಿದ್ದಳು? ಯಾರನ್ನ ಭೇಟಿಯಾಗುತ್ತಿದ್ದಳು ಎಂಬುದರ ಬಗ್ಗೆ ಸಿಸಿಬಿ ತನಿಖೆ ನಡೆಸಿತ್ತು.
ಇದನ್ನೂ ಓದಿ: ಹೊಸ ಮಾರ್ಗಗಳಿಗೆ ಬಿಎಂಟಿಸಿ ಬಸ್ ಸೇವೆ!
ಇನ್ನು, ಚಾಲಾಕಿ ಚೈತ್ರಾ ತಾನು ಮೊದಲು ಬಳಸುತ್ತಿದ್ದ ಮೊಬೈಲ್ ಸ್ವಿಚ್ ಆಫ್ ಮಾಡಿ ಬೇರೆ ಮೊಬೈಲ್ ಬಳಸುತ್ತಿದ್ದಳು. ಕೊನೆಗೆ ಟೆಕ್ನಿಕಲ್ ಟೀಂ ಮೊರೆ ಹೋಗಿದ್ದ ಸಿಸಿಬಿ, ಹಿಂದೂ ಕಾರ್ಯಕರ್ತನ ರೀತಿ ಮಾತನಾಡಿ ಚೈತ್ರಾಳನ್ನು ಖೆಡ್ಡಾಗೆ ಕೆಡವುವಲ್ಲಿ ಯಶಸ್ವಿಯಾಯ್ತು.