Monday, November 18, 2024

ಚಿನ್ನದ ದಿನ.. ಅರ್ಚರಿಯಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ

ಬೆಂಗಳೂರು : ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್​ ಗೇಮ್ಸ್​ ಕ್ರೀಡಾಕೂಟದಲ್ಲಿ ಭಾರತದ ಚಿನ್ನದ ಬೇಟೆ ಮುಂದುವರಿದಿದೆ.

ಅರ್ಚರಿ ಫೈನಲ್​ನಲ್ಲಿ ಭಾರತದ ಓಜಸ್ ಪ್ರವೀಣ್, ಅಭಿಷೇಕ್​ ವರ್ಮಾ ಹಾಗೂ ಪ್ರಥಮೇಶ್ ಸಮಾಧಾನ್ ಒಳಗೊಂಡ ಪುರುಷರ ತಂಡ ಚಿನ್ನದ ಪದಕ ಜಯಿಸಿದೆ. ಈ ತ್ರಿವಳಿ ತಂಡ ಕೊರಿಯಾ ತಂಡವನ್ನು 235-230ರಿಂದ ಸೋಲಿಸಿ ಬಂಗಾರದ ಪದಕಕ್ಕೆ ಮುತ್ತಿಟ್ಟಿದೆ.

ಇನ್ನೂ ಅರ್ಚರಿ ಕಾಂಪೌಂಡ್ ತಂಡ ವಿಭಾಗದ ಫೈನಲ್‌ನಲ್ಲಿ ಚೈನೀಸ್ ತೈಪೇಯಿ ತಂಡವನ್ನು ಮಣಿಸಿದ ಭಾರತ ಚಿನ್ನದ ಪದಕ ಗೆದ್ದಿದೆ. ಭಾರತದ ಅಗ್ರಮಾನ್ಯ ಅರ್ಚರಿ ಸ್ಪರ್ಧಿಗಳಾದ ಜ್ಯೋತಿ ಸುರೇಖಾ ವೆನ್ನಂ, ಅದಿತಿ ಸ್ವಾಮಿ ಹಾಗೂ ಪರ್ನೀತ್ ಕೌರ್ 230-229 ಪಾಯಿಂಟ್‌ಗಳ ಅಂತರದಲ್ಲಿ ಚೈನೀಸ್ ತೈಪೇಯಿ ಜೋಡಿಯನ್ನು ಮಣಿಸಿತು. ಈ ಪದಕದೊಂದಿಗೆ ಭಾರತಕ್ಕೆ ಆರ್ಚರಿ ಸ್ಪರ್ಧೆಗಳಲ್ಲಿ ಕನಿಷ್ಠ ಐದು ಪದಕಗಳನ್ನು ಖಾತ್ರಿಯಾಗಿದೆ.

ಬುಧವಾರ ನಡೆದ ಕಾಂಪಾಂಡ್ ಮಿಕ್ಸೆಡ್ ತಂಡ ವಿಭಾಗದಲ್ಲಿಯೂ ಭಾರತಕ್ಕೆ ಚಿನ್ನದ ಪದಕ ದೊರೆತಿದೆ. 2014ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದಿದ್ದ ಕ್ರೀಡಾಕೂಟದಲ್ಲಿ ಭಾರತ ತಲಾ ಒಂದೊಂದು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿತ್ತು. ಇದರೊಂದಿಗೆ ಈ ಬಾರಿಯ ಕ್ರೀಡಾಕೂಟದಲ್ಲಿ ಭಾರತ ಗೆದ್ದ ಪದಕಗಳ ಸಂಖ್ಯೆ 82ಕ್ಕೆ ಏರಿಕೆಯಾಗಿದೆ.

RELATED ARTICLES

Related Articles

TRENDING ARTICLES