ಬೆಂಗಳೂರು : ಮಹಾತ್ಮ ಗಾಂಧೀಜಿಯವರು ಅನೇಕ ಬಾರಿ ಸೆರೆಮನೆ ಶಿಕ್ಷೆ ಅನುಭವಿಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ರು. ಆದರೆ, ಮತಾಂಧ ಗೂಡ್ಸೆ ಅವರ ಗುಂಡಿಗೆ ಬಲಿಯಾದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 154ನೇ ಜಯಂತಿ ಅಂಗವಾಗಿ ವಿಧಾನಸೌಧದ ಗಾಂಧಿ ಪ್ರತಿಮೆ ಸಮ್ಮುಖದಲ್ಲಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು.
ಬಳಿಕ ಮಾತನಾಡಿ, ಇವತ್ತು ಮಹಾತ್ಮ ಗಾಂಧಿಯವರ ಜನ್ಮದಿನ. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನ ಇದೆ. ಇಡೀ ದೇಶಾದ್ಯಂತ ಗಾಂಧಿಜೀಯವರ ಜಯಂತೋತ್ಸವ ಆಚರಣೆ ಮಾಡಲಾಗುತ್ತಿದೆ. ನಾವೆಲ್ಲಾ ಅವರಿಗೆ ನಮನ ಸಲ್ಲಿಸುತ್ತಿದ್ದೇವೆ. ಅವರ ಹೋರಾಟ, ಬದುಕು ನಮಗೆ ಸ್ಫೂರ್ತಿಯಾಗಲಿ ಎಂದರು.
ದೇಶಕಂಡ ಪ್ರಾಮಾಣಿಕ ಪ್ರಧಾನಿ
ಗಾಂಧಿಯವರು ಅತ್ಯಂತ ಸರಳ ಜೀವನ ನಡೆಸಿದ್ರು. ಅಹಿಂಸಾ ಮಾರ್ಗ ಅನುಸರಿಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಗಾಂಧೀಜಿ. ಸಮಾಜದಲ್ಲಿ ಕಟ್ಟಕಡೆಯ ಮನುಷ್ಯನ ರೀತಿ ಅವರು ಬದುಕಿದ್ರು. ಸತ್ಯ, ಅಂಹಿಸಾ ತತ್ವ ಅಳವಡಿಸಿಕೊಂಡಿದ್ರು. ಲಾಲ್ ಬಹಾದ್ದೂರ್ ಶಾಸ್ತ್ರಿ ದೇಶಕಂಡ ಪ್ರಾಮಾಣಿಕ ಪ್ರಧಾನಿಯಾಗಿದ್ರು. ಅವರ ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಮೌಲ್ಯ ಎಲ್ಲರಿಗೂ ದಾರಿದೀಪ ಎಂದು ಹೇಳಿದರು.
148 ದೇಶಗಳಲ್ಲಿ ಗಾಂಧಿ ಪ್ರತಿಮೆಗಳಿವೆ
ಎಲ್ಲ ಜನರು ಶಾಂತಿ ನೆಮ್ಮದಿಯಿಂದ ಇರಬೇಕು. ದೇಶ ಇಬ್ಭಾಗ ಆಗಬಾರದು ಅಂತ ಹೋರಾಟ ಮಾಡಿದ್ರು. ಇಡೀ ಜಗತ್ತಿನಲ್ಲಿ 148 ದೇಶಗಳಲ್ಲಿ ಮಹಾತ್ಮ ಗಾಂಧೀಜಿಯವರ ಪ್ರತಿಮೆಗಳಿವೆ. ಅವರು ವಿಶ್ವನಾಯಕರು, ಅವರ ಹೋರಾಟ ನಮಗೆ ದಾರಿದೀಪ, ಸ್ಫೂರ್ತಿಯಾಗಲಿ ಎಂದು ಸಿದ್ದರಾಮಯ್ಯ ತಿಳಿಸಿದರು.
ಮುಖ್ಯಮಂತ್ರಿ @siddaramaiah ಅವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 154ನೇ ಜನ್ಮ ದಿನದಂದು ವಿಧಾನಸೌಧದ ಗಾಂಧಿ ಪ್ರತಿಮೆ ಸಮ್ಮುಖದಲ್ಲಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು. pic.twitter.com/RC3hqZclaI
— CM of Karnataka (@CMofKarnataka) October 2, 2023