ಬೆಂಗಳೂರು : ಲೋಕಸಭಾ ಚುನಾವಣೆ ಹಿನ್ನಲೆ ಕಾಂಗ್ರೆಸ್ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ವೀಕ್ಷಕರನ್ನು ನೇಮಕ ಮಾಡಿದೆ.
ಏಳು ತಿಂಗಳು ಬಾಕಿ ಇರುವಾಗಲೇ ಕಾಂಗ್ರೆಸ್ ಅಧಿಕೃತವಾಗಿ ತಯಾರಿ ಆರಂಭಿಸಿದೆ. ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಚಿವರಿಗೆ ವೀಕ್ಷಕರ ಜವಾಬ್ದಾರಿ ನೀಡಿದೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಧಿಕೃತ ಸುತ್ತೋಲೆ ಹೊರಡಿಸಿದ್ದಾರೆ.
ಈ ಮೂಲಕ ಆಯಾ ಕ್ಷೇತ್ರದ ಎಲ್ಲ ಹಂತಗಳ ಮುಖಂಡರನ್ನು ಸಂಪರ್ಕಿಸಿ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಅಡಿ ಇಟ್ಟಿದೆ.
ಯಾವ ಲೋಕಸಭಾ ಕ್ಷೇತ್ರಕ್ಕೆ ಯಾರು ವೀಕ್ಷಕರು?
- ಬಾಗಲಕೋಟೆ : ಪ್ರಿಯಾಂಕ ಖರ್ಗೆ
- ಬೆಂಗಳೂರು ಕೇಂದ್ರ : ಎನ್.ಎಸ್ ಬೋಸರಾಜು
- ಬೆಂಗಳೂರು ಉತ್ತರ : ಡಾ.ಜಿ ಪರಮೇಶ್ವರ್
- ಬೆಂಗಳೂರು ಗ್ರಾಮಾಂತರ : ಕೆ. ವೆಂಕಟೇಶ್
- ಬೆಂಗಳೂರು ದಕ್ಷಿಣ : ಡಾ. ಶರಣಪ್ರಕಾಶ ಪಾಟೀಲ್
- ಬೆಳಗಾವಿ : ಶಿವರಾಜ್ ತಂಗಡಗಿ
- ಗುಲ್ಬರ್ಗಾ : ಬಿ. ನಾಗೇಂದ್ರ
- ಬೀದರ್ : ಸಂತೋಷ್ ಲಾಡ್
- ವಿಜಯಪುರ : ಸತೀಶ್ ಜಾರಕಿಹೊಳಿ
- ಚಾಮರಾಜನಗರ : ದಿನೇಶ್ ಗುಂಡೂರಾವ್
- ಚಿಕ್ಕಬಳ್ಳಾಪುರ : ಬಿ.ಝಡ್. ಜಮೀರ್ ಅಹ್ಮದ್‌ಖಾನ್
- ಚಿಕ್ಕೋಡಿ : ಡಿ. ಸುಧಾಕರ್
- ಚಿತ್ರದುರ್ಗ : ಹೆಚ್.ಸಿ ಮಹದೇವಪ್ಪ
- ದಕ್ಷಿಣ ಕನ್ನಡ : ಮಧು ಬಂಗಾರಪ್ಪ
- ದಾವಣಗೆರೆ : ಈಶ್ವರ್ ಖಂಡ್ರೆ
- ಧಾರವಾಡ : ಲಕ್ಷ್ಮಿ ಹೆಬ್ಬಾಳ್ಕರ್
- ಬಳ್ಳಾರಿ : ಶಿವಾನಂದ ಪಾಟೀಲ್
- ಹಾಸನ : ಎನ್. ಚಲುವರಾಯಸ್ವಾಮಿ
- ಹಾವೇರಿ : ಎಸ್.ಎಸ್ ಮಲ್ಲಿಕಾರ್ಜುನ
- ಕೋಲಾರ : ರಾಮಲಿಂಗಾರೆಡ್ಡಿ
- ಕೊಪ್ಪಳ : ಆರ್.ಬಿ ತಿಮ್ಮಾಪುರ
- ಮಂಡ್ಯ : ಡಾ.ಎಂ.ಸಿ. ಸುಧಾಕರ್
- ಮೈಸೂರು : ಬೈರತಿ ಸುರೇಶ್
- ರಾಯಚೂರು : ಕೆ.ಎಚ್. ಮುನಿಯಪ್ಪ
- ಶಿವಮೊಗ್ಗ : ಕೆ.ಎನ್. ರಾಜಣ್ಣ
- ತುಮಕೂರು : ಕೃಷ್ಣ ಬೈರೇಗೌಡ
- ಉಡುಪಿ & ಚಿಕ್ಕಮಗಳೂರು : ಮಂಕಾಳ ವೈದ್ಯ
- ಉತ್ತರ ಕನ್ನಡ : ಹೆಚ್.ಕೆ ಪಾಟೀಲ್