Wednesday, December 18, 2024

UPA ಮೇಲೆ 12 ಲಕ್ಷ ಕೋಟಿ ಭ್ರಷ್ಟಾಚಾರ ಆರೋಪ ಇದೆ : ಪ್ರಲ್ಹಾದ್ ಜೋಶಿ

ಧಾರವಾಡ : UPA ಮೇಲೆ 12 ಲಕ್ಷ ಕೋಟಿ ಭ್ರಷ್ಟಾಚಾರ ಆರೋಪ ಇದೆ. ಈ ಕಾರಣಕ್ಕೆ UPA ಹೆಸರು ಬದಲಾವಣೆ ಆಗಿದೆ. ಆದರೆ, NDA ಯಾವತ್ತೂ ತನ್ನ ಹೆಸರು ಬದಲಾವಣೆ ಮಾಡಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕುಟುಕಿದರು.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷ ಎಎನ್​ಡಿಎ ಒಕ್ಕೂಟ ಸೇರಿದೆ ಅಂತ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಇದೀಗ ಕುಮಾರಸ್ವಾಮಿ ನಮ್ಮ ಜೊತೆ ಸೇರಿರೋದು ಸಂತೋಷದ ಸಂಗತಿ ಎಂದರು.

NDA ಹೆಸರು ನಮಗೆ ಬದಲಾವಣೆ ಮಾಡುವ ಅವಶ್ಯಕತೆ ಇಲ್ಲ‌. ಯಾಕಂದ್ರೆ ನಮ್ಮ ಪಕ್ಷದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ಇಲ್ಲ. 1998ರಲ್ಲಿ 1999ರಲ್ಲಿ NDA ಸರ್ಕಾರ ಮಾಡಿದ್ವಿ. 2014 ಹಾಗೂ 2019ಕ್ಕೆ NDA ಅಧಿಕಾರ ಬಂದಿದೆ. ಯಾವದೇ ಸಮಯದಲ್ಲಿ NDA ಹೆಸರು ಬದಲಾಣೆ ಮಾಡೋ ಅವಶ್ಯಕತೆ ಬರಲಿಲ್ಲ. ಯಾಕಂದ್ರೆ NDA ಮೇಲೆ ಒಂದೇ ಒಂದು ಆರೋಪ ಇಲ್ಲ ಎಂದು ಹೇಳಿದರು.

RELATED ARTICLES

Related Articles

TRENDING ARTICLES