ಬೆಂಗಳೂರು : ಕಾವೇರಿ ವಿಚಾರದ ಹಿನ್ನೆಲೆ ಪಕ್ಷ ಕಟ್ಟಲು ರಾತ್ರಿಯೆಲ್ಲ ಸಭೆ ನಡೆಸುತ್ತಿರಾ, ಆದರೆ ಕಾವೇರಿ ವಿಚಾರಕ್ಕೆ ಈಗ ಮಾತ್ರ ಸುಮ್ಮನಿದ್ದಿರಾ ಎಂದು ಸರ್ಕಾರದ ವಿರುದ್ಧ ಸಾ.ರಾ ಗೋವಿಂದು ವಾಗ್ದಾಳಿ ನಡೆಸಿದ್ದಾರೆ.
ತಮಿಳುನಾಡಿಗೆ ನೀರು ಹರಿಬಿಟ್ಟು ಅದರ ಬಗ್ಗೆ ಎನೂ ಮಾತನಾಡದೆ ಸರ್ಕಾರ ಸುಮ್ಮನಿರುವುದನ್ನು ಕಂಡು ಸಾ.ರಾ ಗೋವಿಂದು ಅವರು ಮಾತನಾಡಿದ್ದು, ಭಾರತದ ಭೂಪಟದಲ್ಲಿ ಕರ್ನಾಟಕ ಇದ್ಯಾ ಅನ್ನೋ ಅನುಮಾನ ಶುರುವಾಗಿದೆ. ಕಾವೇರಿ ವಿಚಾರದಲ್ಲಿ ಪ್ರಧಾನಿಗಳು ಮದ್ಯೆ ಪ್ರವೇಶಿಸಬೇಕು ಎಂಬ ಕೂಗು ಕೇಳಿ ಬರುತ್ತಿದೆ ಎಂದು ಹೇಳಿದ್ದಾರೆ.
ಚುನಾವಣಾ ಸಮಯದಲ್ಲಿ ಗಲ್ಲಿ ಗಲ್ಲಿ ಸುತ್ತುತ್ತಾರೆ, ಆದರೆ ಈಗ ಸಂಕಷ್ಟ ಬಂದಿದೆ ಈ ಸಮಯದಲ್ಲಿ ಯಾರು ಇಲ್ಲಾ. ಕರ್ನಾಟಕ ಪ್ರಾಧಿಕಾರವೂ ಇದೇ ನಡವಳಿಕೆ ಮುಂದುವರೆಸಿದೆ, ಯಾಕೆ ಕಾವೇರಿ ಪ್ರಾಧಿಕಾರಕ್ಕೆ ಕಣ್ಣ ಇಲ್ವಾ. ಕಾವೇರಿ ವಿಚಾರಕ್ಕೆ ನ್ಯಾಯ ಕೊಡಿಸಬೇಕು ಅಂದ್ರೆ ಕನ್ನಡಪರ ಹೋರಾಟಗಾರರೇ ಬರಬೇಕು.
ಇದನ್ನು ಓದಿ : ಸೋನಿಯಾ ಗಾಂಧಿ ಅವರನ್ನ ಮೆಚ್ಚಿಸಲು ಅಲ್ಲ ನೀವು ಇರುವುದು : ಕುಮಾರಸ್ವಾಮಿ
ಈ ಹಿಂದೆಯೂ ಇದನ್ನು ನಾವು ನೋಡಿದ್ದೇವೆ. ಇಂದು ಸಿದ್ಧರಾಮಯ್ಯ ಸುಮ್ಮನಿದ್ದಾರೆ. ಇಂದು ರೈತರಿಗೆ ಕಷ್ಟ ಬಂದಿದೆ ಕುಡಿಯಲು ಹಾಗೂ ಜಾನುವಾರುಗಳಿಗೆ ನೀರಿ ಇಲ್ಲ. ಈ ಕಷ್ಟ ಅವರಿಗೆ ಕಾಣುಸುತ್ತಿಲ್ಲವ. ಪಕ್ಷ ಕಟ್ಟಲು ರಾತ್ರಿಯೆಲ್ಲ ಸಭೆ ನಡೆಸುತ್ತಿರಾ ಈಗ ಮಾತ್ರ ಸುಮ್ಮನಿದ್ದಿರಾ. ನಮ್ಮ ಸಂಸದರು ಕೂಡ ಸುಮ್ಮನಿದ್ದೇವೆ, ಈ ವಿಚಾರದ ಕುರಿತು ಸೋಮವಾರ ಮೀಟಿಂಗ್ ನಡೆಸಿ ನಾವು ತೀರ್ಮಾನ ತಿಳಿಸುತ್ತೇವೆ ಎಂದು ಸಾ.ರಾ ಗೋವಿಂದು ಅವರು ಹೇಳಿದ್ದಾರೆ.