ಬೆಂಗಳೂರು : ನಮ್ಮ ಪಾರ್ಟಿಗೆ ಹೈಕಮಾಂಡ್ ಇದೆ. ಪಾರ್ಟಿ ನನ್ನ ಡಿಸಿಎಂ ಮಾಡಿದೆ. ಆಸೆ ಬೇಕಾದಷ್ಟು ಜನ ಪಡ್ತಾರೆ. ಆಸೆ ಪಡೋರಿಗೆ ಏನೂ ಹೇಳೋಕಾಗಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಡಿಸಿಎಂ ದಂಗಲ್ ವಿಚಾರದ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶಿವಕುಮಾರ್ ಮೆತ್ತಗಾಗ್ತಾರೋ, ಇಲ್ವೋ ಎಲ್ಲರಿಗೂ ಗೊತ್ತಿದೆ. ನನ್ನ ಪೊಲಿಟಿಕಲ್ ಟ್ರ್ಯಾಕ್ ರೆಕಾರ್ಡ್, 1975 ರಿಂದ ನನ್ನ ಹೋರಾಟ ನೋಡಿದ್ದೀರಿ. ನಾನು ಈ ಮಟ್ಟಕ್ಕೆ ಬಂದಿದ್ದೀನಿ ಎಂದು ತಿಳಿಸಿದರು.
ಸೆ.27ನೇ ತಾರೀಖಿನ ವರೆಗೆ ಬಿಡಬೇಕು ಅಂತ ಕೋರ್ಟ್ ಹೇಳಿದೆ. ಹಿಂದೆಯೂ ಎಸ್.ಎಂ ಕೃಷ್ಣ, ಎಸ್. ಬಂಗಾರಪ್ಪ, ಹೆಚ್.ಡಿ. ದೇವೇಗೌಡರ ಕಾಲದಲ್ಲೂ ಇದೇ ರೀತಿ ಆಗಿತ್ತು. ಹಿಂದೆ 10,000 ಕ್ಯೂಸೆಕ್ಸ್ ಬಿಡೋದಕ್ಕೆ ಬಿಜೆಪಿಯೇ ಅಫಿಡವಿಟ್ ಹಾಕಿತ್ತು. ನಾನು ರಾಜಕಾರಣ ಮಾಡೋಕೆ ಹೋಗಲ್ಲ. ಹೆಚ್.ಡಿ. ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ಬಿ.ಎಸ್ ಯಡಿಯೂರಪ್ಪ ಯಾವ ಲಾಯರ್ಗಳನ್ನ ಇಟ್ಟಿದ್ರೋ ಅವ್ರನ್ನೇ ನಾವು ಇಟ್ಟಿರೋದು ಎಂದು ಹೇಳಿದರು.
ಇದಕ್ಕೆಲ್ಲಾ ಪರಿಹಾರ ಮೇಕೆದಾಟು
ಒಂದು ಬಿಲ್ ಇದೆ, ಮೇಲ್ಮನೆಯಲ್ಲಿ ಪಾಸ್ ಆಗಬೇಕಿದೆ. ಇದಕ್ಕೆಲ್ಲಾ ಪರಿಹಾರ ಮೇಕೆದಾಟು. ಮೇಕೆದಾಟು ಯೋಜನೆಗೆ ದಿನೆ ದಿನೇ ಕಾಸ್ಟ್ ಜಾಸ್ತಿಯಾಗ್ತಿದೆ. ಹಿಂದೆ ಮನಮೋಹನ್ ಸಿಂಗ್ ಅವರು ಸರ್ವಪಕ್ಷಗಳ ಸಭೆ ಕರೆದಿದ್ರು. ಪ್ರಧಾನಿ ಮೋದಿಗೆ ಮನವಿ ಮಾಡಿದ್ದೇವೆ ಎಂದರು.