Saturday, November 23, 2024

ಒಣಗಿದ ಬೆಳೆ, ತೀರದ ಸಾಲ, ಮನನೊಂದು ರೈತ ಆತ್ಮಹತ್ಯೆ

ಗದಗ : ಮಳೆಯಾಗದ ಕಾರಣ ಜಮೀನಿನಲ್ಲಿ ಒಣಗಿದ್ದ ಬೆಳೆಗಳ ಕಂಡು ಕಂಗಾಲಾಗಿದ್ದ ಹಿನ್ನೆಲೆ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿರಹಟ್ಟಿ ತಾಲೂಕಿನ ಛಬ್ಬಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನೀಲಪ್ಪ ಗೊರವರ್ (38) ಮೃತ ವ್ಯಕ್ತಿ. ಎಂಬ ರೈತ 9 ಎಕ್ಕರೆ ಜಮೀನು ಹೋದಿದ್ದು, ಜಮೀನಿನಲ್ಲಿ ಮುಸುಕಿನ ಜೋಳದ ಬೆಳೆಯನ್ನು ಬೆಳೆದಿದ್ದನು. ಜಿಲ್ಲೆಯಲ್ಲಿ ಸರಿಯಾಗಿ ಮಳೆಯಾಗದ ಹಿನ್ನೆಲೆ ಮುಸುಕಿನ ಜೋಳದ ಬೆಳೆ ಒಣಗಿ ಹೋಗಿದ್ದು, ರೈತ ನೀಲಪ್ಪ ತುಂಬಾ ಕಂಗಲಾಗಿ ಹೋಗಿದ್ದನು.

ಇದನ್ನು ಓದಿ : ತಮಿಳುನಾಡಿಗೆ ನೀರು ಬಿಟ್ಟು ಕೋರ್ಟ್ ನಲ್ಲಿ ವಾದ ಮಾಡಲು ಏನಿದೆ? : ಬೊಮ್ಮಾಯಿ

ಇನ್ನೂ ಬೆಳೆಯನ್ನು ಬೆಳೆಯಲು ನೀಲಪ್ಪನ ಬಳಿ ಹಣ ಇಲ್ಲದಿದ್ದರಿಂದ ಕೆವಿಜಿ ಬ್ಯಾಂಕ್​ನಲ್ಲಿ 2 ಲಕ್ಷ ರೂ. ಸಾಲ ಹಾಗೂ ಕೈಗಡ 5 ಲಕ್ಷ ಸಾಲವನ್ನು ಮಾಡಿದ್ದನು. ಇದರಿಂದ ಸಾಲವನ್ನು ತೀರಿಸಲು ಆಗದೆ ಯಾವಾಗಲೂ ಒದ್ದಾಡುತ್ತಿದ್ದನು.  ಅತಿಯಾದ ಸಾಲ ಇನ್ನೊಂದೆಡೆ ಕೈ ಕೊಟ್ಟ ಮಳೆಯಿಂದ ಬೆಳೆ ನಾಶವಾಗಿದ್ದು, ಇದರಿಂದ ಮನನೊಂದ ರೈತ ತನ್ನ ಜಮೀನಿನಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸ್ಥಳಕ್ಕೆ ಶಿರಹಟ್ಟಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನಾ ಸಂಬಂಧ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES