ಕಲಬುರಗಿ : ಸ್ವಾಮಿ ವಿವೇಕಾನಂದ ಅವರ ಭಾವಚಿತ್ರವನ್ನು ಡಸ್ಟ್ಬಿನ್ಗೆ ಅಂಟಿಸಿ ಅವಮಾನ ಮಾಡಿದ್ದ ಯುವಕನನ್ನು ಅಮಾನತ್ತು ಮಾಡಲು ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಯುತ್ತಿದೆ.
ಜಿಲ್ಲೆಯ ಕೇಂದ್ರಿಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ಆದರ್ಶ ಎಂಬ ವಿದ್ಯಾರ್ಥಿ. ಕೇಂದ್ರಿಯ ವಿವಿಯ ಭೀಮಾ ಹಾಸ್ಟೆಲ್ ನ ಗೋಡೆಯ ಮೇಲೆ ಅಂಟಿಸಿದ್ದ ಸ್ವಾಮಿ ವಿವೇಕನಂದ ಅವರ ಭಾವಚಿತ್ರವನ್ನು ಕಿತ್ತು, ಡಸ್ಟ್ಬಿನ್ಗೆ ಅಂಟಿಸಿದ್ದ ವಿದ್ಯಾರ್ಥಿ. ಅಷ್ಟೇ ಅಲ್ಲ ಜಾಯಿನ್ ಎಬಿವಿಪಿ ಅನ್ನೋ ಪೊಸ್ಟರ್ ನಲ್ಲಿ ಹಾಕಿದ್ದ ಸ್ವಾಮಿ ವಿವೇಕಾನಂದ ಅವರ ಭಾವಚಿತ್ರ
ಅಷ್ಟೇ ಅಲ್ಲ ತನ್ನ ಇನ್ಸ್ಟಾಗ್ರಾಂನ ಸಾಮಾಜಿಕ ಜಾಲತಾಣದಲ್ಲಿ ಅಂಟಿಸಿಕೊಂಡು ಸ್ವಾಮಿ ವಿವೇಕನಂದ ಅವರಿಗೆ ಅವಮಾನ ಮಾಡಿದ್ದ ಆದರ್ಶ. ಈ ವಿಚಾರದ ಹಿನ್ನೆಲೆ ಕೇರಳದ ವಿದ್ಯಾರ್ಥಿಗಳು ಆಕ್ರೋಶಗೊಂಡಿದ್ದು, ಆದರ್ಶನನ್ನು ಅಮಾನತ್ತು ಮಾಡುವಂತೆ ಕೇರಳದ ವಿದ್ಯಾರ್ಥಿಗಳು ಪ್ರತಿಭಟನೆಗೆ ಕೂತಿದ್ದಾರೆ.
ಇದನ್ನು ಓದಿ : ಅಪ್ರಾಪ್ತ ಹಿಂದೂ ಹುಡುಗಿಯರ ಕಿಡ್ನಾಪ್ ; ನಾಲ್ವರ ಬಂಧನ
ಈ ಘಟನೆ ಹಿನ್ನೆಲೆ ವಿದ್ಯಾರ್ಥಿಗಳು ಧರಣಿ ಮಾಡಿದ್ದರಿಂದ, ವಿವೇಕಾನಂದ ಅವರಿಗೆ ಅವಮಾನ ಮಾಡಿದ್ದ ವಿದ್ಯಾರ್ಥಿ ಆದರ್ಶನನ್ನು ಅಮಾನತ್ತು ಮಾಡಿದ ಕೇಂದ್ರಿಯ ವಿಶ್ವವಿದ್ಯಾಲಯ. ಈ ಹಿನ್ನೆಲೆ ಆದರ್ಶನ ಅಮಾನತ್ತು ಖಂಡಿಸಿ ಕೇರಳದ ವಿದ್ಯಾರ್ಥಿಗಳು ಪ್ರತಿಭಟನೆಗೆ ಕೌಂಟರ್ ಆಗಿ ಎಬಿವಿಪಿಯಿಂದ ಪ್ರತಿಭಟನೆ ಮಾಡುತ್ತಿದ್ದಾರೆ.