Friday, November 22, 2024

ಮತ್ತೆ ಗ್ರಾಹಕರಿಗೆ ಬರೆ.. ಆಹಾರ ಧಾನ್ಯ ಬೆಲೆಗಳಲ್ಲಿ ಭಾರಿ ಏರಿಕೆ

ಬೆಂಗಳೂರು : ಒಂದು ಕೈಯಲ್ಲಿ ಕೊಟ್ಟು, ಇನ್ನೊಂದು ಕೈಯಲ್ಲಿ ಕಸಿದುಕೊಳ್ಳುವುದು ಅಂದ್ರೆ ಇದೇ ಅನಿಸುತ್ತೆ. ಒಂದು ಕಡೆ ತರಕಾರಿ ಬೆಲೆ ಇಳಿಕೆಯಾದರೆ, ಮತ್ತೊಂದು ಕಡೆ ಬೇಳೆ ಕಾಳು ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ.

ಕಳೆದ 9 ತಿಂಗಳುಗಳಿಂದ ಆಹಾರ ಧಾನ್ಯಗಳ ದರಗಳು ನಿರಂತರಾವಾಗಿ ಏರಿಕೆಯಾಗುತ್ತಲೇ ಇದೆ. ಬಹುತೇಕ ಎಲ್ಲಾ ಬೇಳೆ ಕಾಳುಗಳ ಮೇಲೆ 20 ರಿಂದ 30 ರೂ. ಹೆಚ್ಚಳವಾಗಿದೆ.

ಇನ್ನೂ ಕಬೂಲ್ ಚನ್ನ, ಆಮದು ಮಾಡಿಕೊಂಡ ತೊಗರಿ ಸೇರಿದಂತೆ ಎಲ್ಲದರ ಬೆಲೆಯೂ ಏರಿಕೆ ಹಾದಿಯಲ್ಲೇ ಸಾಗಿದೆ. ಈ ಮಧ್ಯೆ ಕೇಂದ್ರ ಸರ್ಕಾರ ಹಬ್ಬದ ಸೀಸನ್​ಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗದಂತೆ ಕ್ರಮ ಕೈಗೊಂಡಿದೆ. ಬೇಳೆ ಕಾಳುಗಳ ಬೆಲೆ ನೋಡೋದಾದ್ರೆ.

ಹೆಸರು             ಹಿಂದಿನ ದರ     ಇಂದಿನ ದರ

  • ತೊಗರಿ ಬೇಳೆ : 130 – 170
  • ಕಡಲೆ ಬೇರ್  :  70 –  90
  • ಉದ್ದಿನ ಬೇಳೆ :  110 – 130
  • ಹೆಸರು ಬೇಳೆ : 110 – 120
  • ಹೆಸರು ಕಾಳು : 110 – 125
  • ಕಡಲೆ ಕಾಳು : 70 – 90
  • ಅವರೆ ಕಾಳು : 120 – 160
  • ಅವರೆ ಬೇಳೆ : 160 – 190
  • ರಾಜಮ್ಮ    : 140 – 160
  • ಧನಿಯಾ    : 160 – 18೦
  • ಗೋಧಿ       : 35 – 40
  • ಕಾಳು ಮೆಣಸು : 600 – 760
  • ಜೀರಿಗೆ       : 600 – 800
  • ಸಾಸಿವೆ      : 100 – 120
  • ಮೆಂತ್ಯಾ    : 100 – 120

RELATED ARTICLES

Related Articles

TRENDING ARTICLES