ಹಾಸನ : ಕೆ. ಆರ್.ಎಸ್ ಡ್ಯಾಂನಿಂದ ನೀರು ಬಿಡುಗಡೆ ಆದೇಶದ ಹಿನ್ನೆಲೆ ಕಾವೇರಿ ಜಲಾಶಯಗಳ ಪಾತ್ರದ ಜನರಿಗೆ ಆತಂಕ ಹೆಚ್ಚಾಗಿದೆ.
ಕೆ.ಆರ್.ಎಸ್ ಡ್ಯಾಂನಿಂದ ಐದು ಸಾವಿರ ನೀರು ಬಿಡುಗಡೆ ಮಾಡುವ ಆದೇಶ ನೀಡಲಾಗಿತ್ತು. ಡ್ಯಾಂನಲ್ಲಿ ಕೇವಲ 19 ಟಿಎಂಸಿ ನೀರು ಇತ್ತು. ಇದರಲ್ಲಿ 15 ಟಿಎಂಸಿ ನೀರು ಮಾತ್ರ ಬಳಕೆ ಮಾಡಲಾಗಿತ್ತು. ಆದರೆ ಕಳೆದ ಒಂದು ತಿಂಗಳೊಳಗೆ ಕೆ.ಆರ್.ಎಸ್ ಡ್ಯಾಂನಲ್ಲಿ ಬರೋಬ್ಬರಿ 11 ಟಿಎಂಸಿ ನೀರು ಖಾಲಿಯಾಗಿದೆ.
ಅಷ್ಟೇ ಅಲ್ಲ ಮುಖ್ಯನದಿಗೆ ನಿತ್ಯವೂ 1200 ರಿಂದ 1500 ಕ್ಯೂಸೆಕ್ವರೆಗೂ ನೀರು ಹರಿಸಲಾಗಿದೆ. ಇನ್ನೂ ಹೇಮಾವತಿ ಡ್ಯಾಂನಿಂದ ಕೆ.ಆರ್.ಎಸ್ ಡ್ಯಾಂಗೆ ನೀರು ಹೆಚ್ಚುವರಿ ನೀರು ಬಿಡುಗಡೆ ಮಾಡುತ್ತಾರೆ ಎಂಬ ಆತಂಕ ಜನರಲ್ಲಿ ಹೆಚ್ಚಾಗಿ ಕಾಡುತ್ತಿದೆ.
ಇದನ್ನು ಓದಿ : ಬೆಟ್ಟದಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ
ನದಿ, ನಾಲೆಗಳಿಗೆ ಸೇರಿ ನಿತ್ಯವೂ ಆರು ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಹೀಗೆ ಮುಂದುವರೆದರೆ ಒಂದು ತಿಂಗಳೊಳಗೆ ಡ್ಯಾಂನಿಂದ ನೀರು ಖಾಲಿಯಾಗಿ ಹೋಗುತ್ತದೆ. ಈ ಹಿನ್ನೆಲೆ ಕಾವೇರಿ ಕೊಳ್ಳದ ಜಲಾಶಯಗಳ ಪಾತ್ರದ ಜನರಿಗೂ ಇವಾಗಲಿಂದಲೆ ಆತಂಕ ಹೆಚ್ಚಾಗಿದೆ. ಡ್ಯಾಂನೀರನ್ನ ಹೆಚ್ಚುವರಿ ಕಾವೇರಿ ನದಿಗೆ ಹರಿಸೋದಕ್ಕೆ ಮುಂದಾದ್ರೆ ಪ್ರತಿಭಟನೆ ನಡೆಸೋ ಸಾಧ್ಯತೆ ಹೆಚ್ಚಾಗಿದೆ.