ಬೆಂಗಳೂರು : ಪಾಕಿಸ್ತಾನ ಹಾಗೂ ಭಾರತ ನಡುವೆ ನಡೆಯುತ್ತಿರುವ ಏಷ್ಯಾಕಪ್ ಸೂಪರ್-4 ಪಂದ್ಯದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಬೊಂಬಾಟ್ ಆಫ್ ಸೆಂಚುರಿ ಸಿಡಿಸಿದರು.
ನಿನ್ನೆ 17(28) ರನ್ ಸಿಡಿಸಿದ್ದ ಕೆ.ಎಲ್ ರಾಹುಲ್ ಇಂದು ವಿರಾಟ್ ಕೊಹ್ಲಿ ಜೊತೆ ಬ್ಯಾಟಿಂಗ್ ಮುಂದುವರಿಸಿದರು. ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಕನ್ನಡ ಕುವರ 60 ಎಸೆತಗಳಲ್ಲಿ ಒಂದು ಬೊಂಬಾಟ್ ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನೊಂದಿಗೆ ಅರ್ಧಶತಕ ಬಾರಿಸಿದರು.
ಇಂಜುರಿ ಸಮಸ್ಯೆಯಿಂದ ತಂಡ ಸೇರಿಕೊಂಡ ರಾಹುಲ್ ಬದ್ಧ ವೈರಿಗಳ ವಿರುದ್ಧವೇ ಭರ್ಜರಿ ಕಂಬ್ಯಾಕ್ ಮಾಡಿದರು. ಈ ಮೂಲಕ ತಾನು ಸಂಪೂರ್ಣ ಫಿಟ್ ಆಗಿದ್ದು, ನನ್ನನ್ನು ಸುಲಭವಾಗಿ ಪರಿಗಣಿಸಬೇಡಿ ಎಂಬ ಸ್ಪಷ್ಟ ಸಂದೇಶವನ್ನು ಟೀಕಾಕಾರರಿಗೆ ರವಾನಿಸಿದ್ದಾರೆ. ರಾಹುಲ್ ಆಗಮನದಿಂದ ಶ್ರೇಯಸ್ ಅಯ್ಯರ್ ಇಂದಿನ ಪಂದ್ಯದಿಂದ ಹೊರಗುಳಿದಿದ್ದರು.