Monday, November 25, 2024

ಉದಯನಿಧಿ ಸ್ಟಾಲಿನ್​ಗೆ ಯದುವೀರ್ ಒಡೆಯರ್ ತರಾಟೆ

ಮಂಡ್ಯ : ‘ಧರ್ಮದ ಬಗ್ಗೆ ಮಾತನಾಡುವುದು ತಪ್ಪು. ನಾವು ಅವರ ಹೇಳಿಕೆಯನ್ನು ಒಪ್ಪುವುದಿಲ್ಲ. ಧರ್ಮಕ್ಕೆ ಗೌರವ ಕೊಡಬೇಕು’ ಎಂದು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದಯನಿಧಿ ಸ್ಟಾಲಿನ್​ಗೆ ತರಾಟೆ ತೆಗೆದುಕೊಂಡರು.

ಸನಾತನ ಧರ್ಮದ ಬಗ್ಗೆ ಸ್ಟಾಲಿನ್ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಲ್ಲಾ ಧರ್ಮಕ್ಕೂ ಒಂದು ಗೌರವ, ಮರ್ಯಾದೆ ಇರಬೇಕು. ನಮ್ಮ ನಾಡು, ದೇಶದಲ್ಲಿ ಸನಾತನ ಧರ್ಮ ಎಲ್ಲಕ್ಕೂ ಮೂಲ’ ಎಂದು ಹೇಳಿದರು.

ಪ್ರತಿ ವರ್ಷ ಯಾವ ರೀತಿ ನಡೆಯುತ್ತದೆಯೋ ಅದೇ ರೀತಿ ಮೈಸೂರು ದಸರಾ ನಡೆಯಲಿದೆ. ಯಾವುದೇ ಬದಲಾವಣೆ ಇಲ್ಲದೆ ವಿಧಿ ವಿಧಾನ, ಧಾರ್ಮಿಕ ಆಚರಣೆ ನಡೆಯಬೇಕು, ಏನೇ ಆದರೂ ಅದು ನಡೆಯುತ್ತದೆ. ದಸರಾ ವಿಜೃಂಭಣೆಯಿಂದ ನಡೆಯುವುದೇ ಆಚರಣೆ. ರಾಜ್ಯ ಸರ್ಕಾರ ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ಮಹಿಷಾ ದಸರಾ ಆಚರಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಇದರ ಬಗ್ಗೆ ನನ್ನ ಅಭಿಪ್ರಾಯ ಇಲ್ಲ. ಸಂವಿಧಾನದ ಪ್ರಕಾರ ಯಾರು, ಬೇಕಾದರೂ ಏನು ಬೇಕಾದರೂ ಅನುಸರಿಸಬಹುದು ಎಂದು ಯದುವೀರ್ ಒಡೆಯರ್ ಅಭಿಪ್ರಾಯಪಟ್ಟರು.

ಸ್ಟಾಲಿನ್ ವಿರುದ್ಧ ಪ್ರತಿಭಟನೆ

ಸನಾತನ ಧರ್ಮ ಕುರಿತು ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರದಲ್ಲಿ ಪ್ರತಿಭಟನೆ ನಡೆಸಲಾಯಿತು. ಮಹಾಲಿಂಗಪುರದ ನಗರದ ರಾಣಿ ಚೆನ್ನಮ್ಮ ವೃತ್ತದಲ್ಲಿ ಹಿಂದೂ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಗಿದೆ. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ನೂರಾರು ಕಾರ್ಯಕರ್ತರು ಸಚಿವ ಉದಯನಿಧಿ ಸ್ಟಾಲಿನ್ ಭಾವಚಿತ್ರಕ್ಕೆ ಬೆಂಕಿಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES