Thursday, January 2, 2025

ಸಿದ್ದರಾಮಯ್ಯ ಬಗ್ಗೆ ಮರುಕ ವ್ಯಕ್ತಪಡಿಸಿದ ಬೊಮ್ಮಾಯಿ

ಬಳ್ಳಾರಿ : ‘ಆಗಿನ ಸಿದ್ರಾಮಣ್ಣನೇ ಬೇರೆ, ಈಗಿನ ಸಿದ್ರಾಮಣ್ಣ ಬೇರೆನೇ.. ಈಗಿರುವ ಸಿಎಂ ಸಿದ್ದರಾಮಯ್ಯನವರು ಬಹಳ ವ್ಯತ್ಯಾಸದಿಂದ ಇದ್ದಾರೆ. ಈಗ ಆಡಳಿತ ಯಂತ್ರ ಅವರ ನಿಯಂತ್ರಣದಲ್ಲಿ ಇಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮರುಕ ವ್ಯಕ್ತಪಡಿಸಿದರು.

ಬಳ್ಳಾರಿಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರ ಆಡಳಿತವು ಹಿಂದಿನಂತೆ ಇಲ್ಲ. 2013 ರಿಂದ 2018ರವರಗೆ ಮೊದಲ ಅವಧಿ ಅವರ ಕೈಯಲ್ಲಿತ್ತು. ಈಗ 2023ರ ಎರಡನೇ ಅವಧಿ ಸಂಪೂರ್ಣವಾಗಿ ಹದಗೆಟ್ಟಿದೆ. ಆಡಳಿತ ಯಂತ್ರ ಅವರ ನಿಯಂತ್ರಣದಲ್ಲಿಯೇ ಇಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

‘ಸಿದ್ದರಾಮಯ್ಯ ನಾಮಕಾವಸ್ಥೆಗೆ ಮಾತ್ರ ಮುಖ್ಯಮಂತ್ರಿ. ಹಿಂದಿನಂತೆ ಇಂದು ಸಿದ್ದರಾಮಯ್ಯ ಅವರು ಇಲ್ಲ. ವರ್ಗಾವಣೆಯ ದಂಧೆ ಅವರ ಕಣ್ ಸನ್ನೆಯಲ್ಲೇ ನಡೆಯುತ್ತದೆ. ಸಿದ್ದರಾಮಯ್ಯ ಸಮಾಜವಾದಿ ನೆಲೆಗಟ್ಟಿನಿಂದ ಬಂದವರು ಎನ್ನುವುದು ಇಂದು ನಂಬಿಕೆಯಿಲ್ಲ’ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಆಂತರಿಕ ಬೇಗುದಿ ಸ್ಫೋಟ

ಸಿದ್ದರಾಮಯ್ಯ ವಿರುದ್ಧ ಬಿ.ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿರುವ ಬಗ್ಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಆಂತರಿಕ ಬೇಗುದಿ ಬೆಳದಿದೆ, ಇದರ ಒಂದು ಭಾಗ ಬಿ.ಕೆ ಹರಿಪ್ರಸಾದ್ ಇದ್ದಾರೆ. ಇನ್ನೊಂದು ಭಾಗದಲ್ಲಿ ಬೇರೆಯವರು ಇದ್ದಾರೆ. ಬಿ.ಕೆ ಹರಿಪ್ರಸಾದ್ ಕಾಂಗ್ರೆಸ್ಸಿನಲ್ಲಿ ತುಂಬಾ ಪ್ರಬಲವಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತದ ಬಗ್ಗೆ ಶಾಸಕರಲ್ಲಿ ಅಸಮಾಧಾನವಿದೆ. ಬಿ.ಕೆ.ಹರಿಪ್ರಸಾದ್ ಅವರ ಹೇಳಿಕೆಯಿಂದ ಅದು ಬಹಿರಂಗವಾಗಿದೆ’ ಎಂದು ಚಾಟಿ ಬೀಸಿದರು.

RELATED ARTICLES

Related Articles

TRENDING ARTICLES