ಚಿಕ್ಕಮಂಗಳೂರು : ಗ್ರಾಮದಲ್ಲಿ ಮಾರಿಹಬ್ಬ ಆಚರಣೆ ಹಿನ್ನೆಲೆ ಬೆನ್ನಿಗೆ ಸರಳು ಚುಚ್ಚಿಕೊಂಡು ಪರಾಕಾಷ್ಠೆ ಮೆರೆದಿರುವ ಘಟನೆ ಹನೂರು ತಾಲೂಕಿನ ಗೋಪಿನಾಥಂ ಗ್ರಾಮದಲ್ಲಿ ನಡೆದಿದೆ.
ದಂತಚೋರ ವೀರಪ್ಪನ್ನ ಊರಾದ ಗೋಪಿನಾಥಂ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಗ್ರಾಮದಲ್ಲಿ ಮಾರಿಹಬ್ಬ ಆಚರಣೆಯನ್ನು ಮಾಡಲಾಗಿದೆ. ದಿ.ಅರಣ್ಯಾಧಿಕಾರಿ ಪಿ.ಶ್ರೀನಿವಾಸ್ ಕಟ್ಟಿಸಿದ ದೇಗುಲದಲ್ಲಿ ಈ ವಿಶೇಷ ಆಚರಣೆ ನಡೆಯುತ್ತದೆ.
ಇದನ್ನು ಓದಿ : ಬಿಎಸ್ವೈ ಕಡೆಗಣಿಸಿದ್ದು ಬಿಜೆಪಿಗೆ ಶಾಪವಾಗಿದೆ : ರೇಣುಕಾಚಾರ್ಯ
ಈ ಹಿನ್ನೆಲೆ ಹತ್ತಾರು ಭಕ್ತರು ಸರಳು ಚುಚ್ಚಿಕೊಂಡು ಹಾಗೂ ಹಲವಾರು ಜನರು ಬಾಯಿಗೆ ಬೀಗ ಹಾಕಿಕೊಂಡು ಹರಕೆ ತೀರಿಸಿ, ದೇವರ ಕೃಪೆಯಲ್ಲಿ ಭಾಗಿಯಾಗುತ್ತಾರೆ. ಈ ಭಾರಿಯು ಸಹ ಅದೇ ರೀತಿ ಯುವಕನೋರ್ವ ಬೆನ್ನಿಗೆ ಸರಳು ಚುಚ್ಚಿಕೊಂಡು ನೇತಾಡುತ್ತ ಗಿರಗಿಟ್ಲೆಯಂತೆ ಸುತ್ತಿದ್ದಾನೆ.
ಈ ಘಟನೆ ಕಂಡು ಭಕ್ತರು ಮೈನವಿರೇಳುವಂತೆ ಮಾಡಿದ್ದಾನೆ.