Wednesday, November 20, 2024

ಕುಮಾರಸ್ವಾಮಿ ಸರ್ಕಾರ ತೆಗೆದ್ರಲ್ಲಾ : ಡಿಕೆಶಿ ಕಿಡಿ

ಬೆಂಗಳೂರು : ಬಿಜೆಪಿ ಶಾಸಕರು‌ ಕಾಂಗ್ರೆಸ್ ಪಕ್ಷ ಸೇರ್ಪಡೆ ವಿಚಾರ ಕುರಿತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್ ಪಕ್ಷಕ್ಕೆ ಯಾರ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

ಕೆಲವರು ಅವರ ಸಮಸ್ಯೆಗಳನ್ನು ನಮ್ಮ ಬಳಿ ಹೇಳಿಕೊಳ್ಳುತ್ತಿದ್ದಾರೆ. ಹಾಗಾಗಿ, ಸಾಧ್ಯವಾದಷ್ಟು ಅವರಿಗೆ ಜನರಿಗೆ ಸಹಾಯ ಮಾಡುವ ಪ್ರಯತ್ನ ಮಾಡ್ತಿದ್ದೇವೆ. ಅದು‌ ಬಿಟ್ರೆ ಬೇರೆನೂ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಭವಿಷ್ಯ ಇದೆ ಅಂತ ಕೆಲವರು‌ ಇಚ್ಚೆ ಪಡುವವರು ಇರ್ತಾರೆ ಎಂದು ತಿಳಿಸಿದ್ದಾರೆ.

ಆಪರೇಷನ್ ಹಸ್ತ ವದಂತಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇವರು ಮಾಡಿದಾಗ ಏನಾಯ್ತು? ಡಬಲ್ ಇಂಜಿನ್ ಸರ್ಕಾರ ಕೆಡವಿದ್ರಲ್ಲಾ? ಕುಮಾರಸ್ವಾಮಿ ಸರ್ಕಾರ ತೆಗೆದ್ರಲ್ಲಾ? ಎಂದು ಕುಟುಕಿದ್ದಾರೆ.

ಇಂದು ಎಲ್ಲಾ ಮಹಿಳೆಯರ (ಯಜಮಾನಿಯರ) ಅಕೌಂಟ್​ಗೆ ಹಣ ಮಂಜೂರಾತಿ ಆಗಲಿದೆ. ಬ್ಯಾಂಕ್ ನವರು ಟೈಂ ಫಿಕ್ಸ್ ಮಾಡಿಕೊಂಡು ಹಂತ ಹಂತವಾಗಿ ಹಣ ಹಾಕಲಿದ್ದಾರೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES