ಚಿತ್ರದುರ್ಗ : ಬೆಳೆ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಹಿನ್ನೆಲೆ ಕೃಷಿ ಸಚಿವರ ಕಾಲಿಗೆ ಬಿದ್ದು ಅಳಲು ತೊಡಿಕೊಂಡ ರೈತ ಮಹಿಳೆ ಘಟನೆ ಚಳ್ಳಕೆರೆ ತಾಲೂಕಿನ ತಿಮ್ಮನಹಳ್ಳಿಯಲ್ಲಿ ನಡೆದಿದೆ.
ಚಳ್ಳಕೇರಿ ತಾಲೂಕಿನ ವಿವಿದೆಡೆ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ಭೇಟಿ ನೀಡಿದ್ದರು. ಈ ವೇಳೆ ತಿಮ್ಮನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಆ ಗ್ರಾಮದ ರೈತ ಜಯಮ್ಮ ಎಂಬುವವರು ಮಳೆ ಇಲ್ಲದೆ ತಾನು ಬೆಳೆದಿದ್ದ, ಶೇಂಗಾ ಬೆಳೆ ಸಂಪೂರ್ಣ ವಿಫಲ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು.
ಇದನ್ನು ಓದಿ : ಇಬ್ಬರು ದ್ವಿಚಕ್ರ ವಾಹನ ಕಳ್ಳರ ಬಂಧನ
ಕೃಷಿ ಸಚಿವರು ಭೇಟಿ ನೀಡಿದ್ದರಿಂದ ರೈತ ಮಹಿಳೆ ಸಚಿವರ ಬಳಿ ಬಂದು ಅವರ ಕಾಲಿಗೆ ಬಿದ್ದು ತನ್ನ ಅಳಲನ್ನು ತೊಡಿಕೊಂಡ ಜಯಮ್ಮ. ಬಳಿಕ ಜಯಮ್ಮನ ಸ್ಥಿತಿ ಕಂಡು ಮರುಗಿದ ಕೃಷಿ ಸಚಿವ ರೈತ ಮಹಿಳೆಗೆ ವೈಯಕ್ತಿಕವಾಗಿ 25 ಸಾವಿರ ರೂ. ಧನ ಸಹಾಯವನ್ನು ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿಯವರು.
ಬಳಿಕ ಮತ್ತೆ ಶೇಂಗಾ ಮತ್ತು ಮೆಕ್ಕೆಜೋಳ ಬೆಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.