Monday, November 18, 2024

ಕೀಟನಾಶಕ ಸುರಿದು ಬೆಳ್ಳುಳ್ಳಿ ಬೆಳೆ ನಾಶ ಮಾಡಿದ ಕೀಡಿಗೇಡಿಗಳು

ಚಾಮರಾಜನಗರ : ರೈತನೊಬ್ಬ ಬೆಳೆದಿದ್ದ ಬೆಳೆಗೆ ಕೀಟನಾಶಕ ಸುರಿದು ಒಂದೂವರೆ ಎಕರೆ ಬೆಳ್ಳುಳ್ಳಿ ಬೆಳೆ ನಾಶ ಮಾಡಿರುವ ಕಡಿಗೇಡಿಗಳು ಘಟನೆ ಗುಂಡ್ಲುಪೇಟೆ ತಾಲೂಕಿನ ಕಲ್ಲಿಗೌಡನಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ಸಂತೋಷ್ ಎಂಬ ರೈತ ತನ್ನ ಒಂದೂವರೆ ಎಕ್ಕರೆಯಲ್ಲಿ ಬೆಳ್ಳುಳ್ಳಿ ಬೆಳೆಯನ್ನು ಬೆಳೆಸಿದ್ದರು. ಬೆಳೆ ಕೂಡ ಉತ್ತಮವಾಗಿ ಬಂದು ಲಾಭದ ನಿರೀಕ್ಷೆಯಲ್ಲಿದ್ದ ರೈತ. ಈ ವೇಳೆ ಹೊಟ್ಟೆಕಿಚ್ಚಿನಿಂದಲೋ ಅಥವಾ ದ್ವೇಷದಿಂದಲೋ, ಜಮೀನಿನಲ್ಲಿ ನಿರ್ಮಾಣ ಮಾಡಿದ್ದ ಕೃಷಿ ಹೊಂಡಕ್ಕೆ ಕಳೆ ನಾಶಕ ಔಷಧಿ ಸುರಿದಿರುವ ಕಿಡಿಗೇಡಿಗಳು.

ಇದನ್ನು ಓದಿ : ಪೆಟ್ರೋಲ್-ಡೀಸೆಲ್ ಬೆಲೆಯೂ ಇಳಿಕೆ?

ಆದರೆ ಇದರ ಅರಿವಿಲ್ಲದೆ ಕಳೆದ 3 ದಿನಗಳಿಂದಲೂ ಬೆಳ್ಳುಳ್ಳಿ ಬೆಳೆಗೆ ನೀರು ಹಾಯಿಸಿದ ರೈತ ಸಂತೋಷ್. ಈ ಹಿನ್ನಲೆ ಬೆಳೆದಿದ್ದ ಬೆಳ್ಳುಳ್ಳಿ ಬೆಳೆ ಸಂಪೂರ್ಣ ನಾಶವಾಗಿದೆ. ಅಷ್ಟೇ ಅಲ್ಲದೆ ಕೃಷಿ ಹೊಂಡದಲ್ಲಿ ಸಾಕಿದ್ದ ಮೀನುಗಳು ಕೂಡ ಸಾವನ್ನಪ್ಪಿವೆ.

ಬೆಳ್ಳುಳ್ಳಿ ಬೆಳೆಯನ್ನೇ ನಂಬಿ ಸಾಲ ಮಾಡಿ ಲಕ್ಷಾಂತರ ರೂ. ಬಂಡವಾಳ ಹಾಕಿದ್ದ ರೈತ. ಅಂದಾಜು 5 ಲಕ್ಷ ರೂ. ಖುರ್ಚು ಮಾಡಿ ಬೆಳೆ ಬೆಳೆದಿದ್ದ ಫಸಲನ್ನು ನಾಶ ಮಾಡಿ ರೈತನ ಬಾಳನ್ನೇ ಹಾಳುಗೆಡವಿರುವ ಪಾಪಿ ಕೀಡಿಗೇಡಿಗಳು.

RELATED ARTICLES

Related Articles

TRENDING ARTICLES