Friday, November 22, 2024

ಗಣೇಶ ಹಬ್ಬಕ್ಕೆ ಜಿಯೋದಿಂದ ಏರ್​ಫೈಬರ್ ಸರ್ವಿಸ್

ಬೆಂಗಳೂರು : ರಿಲಯನ್ಸ್ ಜಿಯೋದ ಬಹುನಿರೀಕ್ಷೆಯ ಏರ್​ಫೈಬರ್ ಸರ್ವಿಸ್​ನ ಬಿಡುಗಡೆ ಮುಹೂರ್ತ ಫಿಕ್ಸ್ ಆಗಿದೆ.

ರಿಲಯನ್ಸ್​ನ 46ನೇ ವಾರ್ಷಿಕ ಮಹಾಸಭೆಯಲ್ಲಿ ಮುಕೇಶ್ ಅಂಬಾನಿ ಅವರು ಏರ್​ಫೈಬರ್ ಸರ್ವಿಸ್ ಬಗ್ಗೆ ಪ್ರಸ್ತಾಪಿಸಿದ್ದು, ಗಣೇಶ ಚತುರ್ಥಿ ಹಬ್ಬದ ದಿನವಾದ ಸೆಪ್ಟೆಂಬರ್ 19ರಂದು ಬಿಡುಗಡೆ ಮಾಡುತ್ತಿರುವುದಾಗಿ ಹೇಳಿದ್ದಾರೆ.

ಈ ಏರ್​ಫೈಬರ್ ಸೇವೆ ಮೂಲಕ ಜಿಯೋ ದಿನಕ್ಕೆ ಒಂದೂವರೆ ಲಕ್ಷ ಕನೆಕ್ಷನ್​ಗಳ ವೇಗದಲ್ಲಿ ಒಟ್ಟು 20 ಕೋಟಿಯಷ್ಟು ಗ್ರಾಹಕರನ್ನು ತಲುಪುವ ಗುರಿ ಹೊಂದಿದೆ. ‘ಭಾರತದಾದ್ಯಂತ ಇರುವ 5ಜಿ ನೆಟ್ವರ್ಕ್ ಅನ್ನು ಜಿಯೋ ಏರ್​ಫೈಬರ್ ಬಳಸುತ್ತದೆ. ಇದರಿಂದ ದಿನಕ್ಕೆ 1.5 ಲಕ್ಷ ಕನೆಕ್ಷನ್ ಕೊಡಲು ಸಾಧ್ಯವಾಗುತ್ತದೆ,’ ಎಂದು ಮುಕೇಶ್ ಅಂಬಾನಿ ಮಾಹಿತಿ ನೀಡಿದ್ದಾರೆ.

ರಿಲಯನ್ಸ್ ಜಿಯೋದ ಬ್ರಾಡ್​ಬ್ಯಾಂಡ್ ಸೇವೆಯಾದ ಜಿಯೋಫೈಬರ್ ಸೇವೆಯನ್ನು 1 ಕೋಟಿ ಗ್ರಾಹಕರು ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಜಿಯೋ ಏರ್​ಫೈಬರ್ ಸೇವೆಯನ್ನು 20 ಕೋಟಿ ಗ್ರಾಹಕರಿಗೆ ತಲುಪಿಸುವ ಗುರಿ ಇದೆ ಎಂದು ಅಂಬಾನಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES