Thursday, December 19, 2024

ಬಿಜೆಪಿಗರ ಪಾಡು ನೋಡಿದ್ರೆ ವ್ಯಥೆ ಆಗುತ್ತೆ : ಈಶ್ವರ್ ಖಂಡ್ರೆ

ಬೀದರ್ : ಪ್ರಧಾನಿ ಮೋದಿ ಅವರು ಇಸ್ರೋ ಕಚೇರಿಗೆ ಭೇಟಿ ನೀಡಿದ ವೇಳೆ ಬಿಜೆಪಿ ನಾಯಕರಿಗೆ ಅವಮಾನ ವಿಚಾರವಾಗಿ ಸಚಿವ ಈಶ್ವರ್ ಖಂಡ್ರೆ ವ್ಯಂಗ್ಯವಾಡಿದ್ದಾರೆ.

ಬೀದರ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿ ನಾಯಕರ ಪಾಡು ನೋಡಿದ್ರೆ ನನಗೆ ವ್ಯಥೆ ಆಗುತ್ತೆ ಎಂದು ಕುಟುಕಿದ್ದಾರೆ.

ಬಿಜೆಪಿ ನಾಯಕರ ಪರ ನಮಗೆ ಕನಿಕರ ಬರುತ್ತದೆ. ಬಿಜೆಪಿಯ ಬಹುತೇಕ ನಾಯಕರು ತರಾತುರಿಯಲ್ಲಿ ಕಾಂಗ್ರೆಸ್ ಸೇರಲು ತುದಿಗಾಲಿನಲ್ಲಿ ನಿಂತಿದ್ದಾರೆ. ಬಿಜೆಪಿ ನಾಯಕರ ಅರ್ಜಿಯನ್ನು‌ ನಮ್ಮ ವರಿಷ್ಠರು ನೋಡಿ ತಿರ್ಮಾನ ‌ಮಾಡುತ್ತಾರೆ. ನೂರಾರು ಜನ‌ ಬರುತ್ತಾರೆ, ಯಾರು ಅಂತ ಹೆಸರು ಹೇಳಲಿ ಎಂದು ಹೇಳಿದ್ದಾರೆ.

ಸಾವಿರಾರು ಅರ್ಜಿಗಳು ಬಂದಿವೆ

ಸರ್ಕಾರವೇ ಜನರ ಮನೆಗೆ ಬರುವಂತಹ ಕಾರ್ಯಕ್ರಮ ಈ ಜನ ಸ್ಪಂದನ. ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡುವುದು, ಆದಷ್ಟು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡುತ್ತೇವೆ. ಬಡವರ ಸಮಸ್ಯೆಗಳಿಗೆ ಸ್ಪಂದನೆ ನೀಡುವುದೇ ಸ್ಪಂದನಾ ಕಾರ್ಯಕ್ರಮ. ಜನ ಸ್ಪಂದನ ಕಾರ್ಯಕ್ರಮಕ್ಕೆ ಸಾವಿರಾರು ಅರ್ಜಿಗಳು ಬಂದಿವೆ ಎಂದು ಈಶ್ವರ್ ಖಂಡ್ರೆ ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES