ತುಮಕೂರು : ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಗಂಗಾಧರ ಅಜ್ಜಯ್ಯನ ಗದ್ದುಗೆ ಪೂಜೆ ಸಲ್ಲಿಸಿ, ದರ್ಶನ ಪಡೆದರು.
ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾನು ಅತಿ ಹೆಚ್ಚು ಪ್ರೀತಿಸುವ ಸ್ಥಳ ಇದು, ಶ್ರೀಗಳು ಆಶೀರ್ವದಿಸುತ್ತಾರೆ. ನೊಣವಿನಕೆರೆ ಅಜ್ಜಯ್ಯನ ಮಠಕ್ಕೆ ಬಂದಾಗ ನನ್ನ ಎನರ್ಜಿ ಹೆಚ್ಚಾಗುತ್ತೆ ಎಂದು ಹೇಳಿದ್ದಾರೆ.
ಅಜ್ಜಯ್ಯನ ಮೇಲೆ ಪ್ರಮಾಣ ಮಾಡು ಅಂದವರೆಲ್ಲ ಈಗ ಏನಾದ್ರೂ? ನಮ್ಮ ಅಜ್ಜಯ್ಯನ ಹೆಸರು ತೆಗೆದುಕೊಂಡವರು ಈಗ ಉಲ್ಟಾ ಹೊಡೆದ್ರು. ಯಾಕೆ ಉಲ್ಟಾ ಹೊಡೆದ್ರು ಅವರು. ಅದೇ ಅಜ್ಜನ ಶಕ್ತಿ. ನಾನೇನಾದ್ರೂ ಮಾಡಿದ್ರೆ ತಾನೇ ಯೋಚನೆ ಮಾಡ್ಬೇಕು. ಅಜ್ಜಯ್ಯನ ಪ್ರಮಾಣದ ಬಗ್ಗೆ ಮಾತನಾಡಿದವರೆಲ್ಲ ಈಗ ರಿವರ್ಸ್ ಹೊಡೆದಿದ್ದಾರೆ ಎಂದು ತಿರುಗೇಟು ಕೊಟ್ಟಿದ್ದಾರೆ.
ಪಾಪಾ ಕಾಂಟ್ರಾಕ್ಟರ್ ಗಳದ್ದೇನು ತಪ್ಪಿಲ್ಲ. ಕೆಲ ರಾಜಕೀಯದವ್ರು ಮಾಡಿದ್ದು ಅದು. ರಾಜಕೀಯದವರು ಮಿಸ್ ಗೈಡ್ ಮಾಡಿ ಗುತ್ತಿಗೆದಾರರ ದಿಕ್ಕು ತಪ್ಪಿಸಿದ್ರು. ಮಾಜಿ ಸಚಿವ ರೇಣುಕಾಚಾರ್ಯ ಕಾಂಗ್ರೆಸ್ಗೆ ಬರ್ತಾರಾ ಅನ್ನೋ ವಿಚಾರವಾಗಿ ಮಾತನಾಡಿ, ಅವೆಲ್ಲ ಪಟ್ಟಿ ಇಲ್ಲಿ ಹೇಳೋಕಾಗಲ್ಲ ಎಂದು ಡಿಕೆಶಿ ಹೇಳಿದ್ದಾರೆ.
ಇದನ್ನೂ ಓದಿ : ಸರ್ಕಾರ ಬೀಳಿಸೋಕೆ ಸುಧಾಕರ್ ಏನೂ ಶಾಸಕರಾ? : ಸತೀಶ್ ಜಾರಕಿಹೊಳಿ
ಅಜ್ಜಯ್ಯನ ಮೇಲೆ ಪ್ರಮಾಣ
ಪ್ರಯತ್ನದ ಜೊತೆಗೆ ದೇವರ ಅನುಗ್ರಹ ಸಿಕ್ಕಾಗಲೇ ಯಶಸ್ಸು. ನನ್ನ ನಂಬಿಕೆಯ ಆರಾಧ್ಯದೈವ ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಇಂದು ಭೇಟಿ ನೀಡಿ, ಲೋಕಕಲ್ಯಾಣಕ್ಕಾಗಿ ದೇವರಲ್ಲಿ ಪ್ರಾರ್ಥಿಸಿದೆ ಎಂದು ತಿಳಿಸಿದ್ದಾರೆ.
'ಪ್ರಯತ್ನದ ಜೊತೆಗೆ ದೇವರ ಅನುಗ್ರಹ ಸಿಕ್ಕಾಗಲೇ ಯಶಸ್ಸು'
ನನ್ನ ನಂಬಿಕೆಯ ಆರಾಧ್ಯದೈವ ನೊಣವಿನಕೆರೆ ಶ್ರೀ ಕಾಡಸಿದ್ದೇಶ್ವರ ಮಠಕ್ಕೆ ಇಂದು ಭೇಟಿ ನೀಡಿ, ಲೋಕಕಲ್ಯಾಣಕ್ಕಾಗಿ ದೇವರಲ್ಲಿ ಪ್ರಾರ್ಥಿಸಿದೆ. pic.twitter.com/iPll8AMDtX— DK Shivakumar (@DKShivakumar) August 27, 2023
ಈ ವೇಳೆ ನಡೆದ ಕರವಗಲ್ ಶ್ರೀ ಆಂಜನೇಯಸ್ವಾಮಿ ನೂತನ ದೇವಾಲಯದ ಪ್ರತಿಷ್ಠಾಪನೆ ಕಾರ್ಯಕ್ರಮ ಹಾಗೂ ಧರ್ಮಸಭೆಯಲ್ಲಿ ಭಾಗವಹಿಸಿದರು. ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮಿಗಳ ಸಾನಿಧ್ಯದಲ್ಲಿ ಈ ಪವಿತ್ರ ಕ್ಷೇತ್ರದ ಉದ್ಘಾಟನೆ ನೆರವೇರಿದೆ. ಶ್ರೀಗಳ ಹಾಗೂ ಆಂಜನೇಯನ ಆಶೀರ್ವಾದ ನಮ್ಮೆಲ್ಲರ ಮೇಲಿದೆ. ಮಾನವ ಧರ್ಮದ ಉಳಿವಿಗಾಗಿ ನಾವೆಲ್ಲರೂ ಒಗ್ಗಟ್ಟಾಗಬೇಕು ಎಂದು ಹೇಳಿದ್ದಾರೆ.