ಬೆಂಗಳೂರು : ಟೀಂ ಇಂಡಿಯಾ ರನ್ ಮೆಷಿನ್ ವಿರಾಟ್ ಕೊಹ್ಲಿ ಬಿಸಿಸಿಐ ನಿಯಮ ಮುರಿದಿದ್ದು, ಖಡಕ್ ವಾರ್ನಿಂಗ್ ನೀಡಲಾಗಿದೆ.
ಏಷ್ಯಾಕಪ್ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಆಟಗಾರರು ಬೆಂಗಳೂರಿನ ಎನ್ಸಿಎಯಲ್ಲಿ ಅಭ್ಯಾಸ ಆರಂಭಿಸಿದ್ದಾರೆ.
ಬಹಳ ಕಾಲದಿಂದ (ಸಮಯದಿಂದ) ತಂಡದಿಂದ ಹೊರಗುಳಿದ ಆಟಗಾರರನ್ನು ಬಿಸಿಸಿಐ ಯೋ ಯೋ ಟೆಸ್ಟ್ಗೆ ಒಳಪಡಿಸುತ್ತಿದೆ. ಆದರೆ, ಯೋ ಯೋ ಟೆಸ್ಟ್ಗೆ ಒಳಗಾದ ಸ್ಟಾರ್ ಬ್ಯಾಟರ್ ಕೊಹ್ಲಿ ಮಹಾ ಎಡವಟ್ಟು ಮಾಡಿಕೊಂಡಿದ್ದಾರೆ.
ಕೊಹ್ಲಿ ಅವರು ತಮ್ಮ ಫಿಟ್ನೆಸ್ ಮಾರ್ಕ್ಸ್ಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಬಿಸಿಸಿಐ ಖಡಕ್ ವಾರ್ನಿಂಗ್ ನೀಡಿದೆ. ಯಾವುದೇ ಆಟಗಾರರೂ ತಮ್ಮ ಫಿಟ್ನೆಸ್ ಮಾರ್ಕ್ಸ್ಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುವಂತಿಲ್ಲ ಎಂದು ಸೂಚಿಸಿದೆ.