Saturday, November 23, 2024

Chess Worldcup: ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟ ಚೆಸ್​ ಪಟು ಪ್ರಗ್ನಾನಂದ!

ಬಾಕು:  ಚೆಸ್​ ವಿಶ್ವಕಪ್​ನಲ್ಲಿ ಭಾರತದ ಯುವ ಚದುರಂಗ ಪ್ರತಿಭೆ ಆರ್​. ಪ್ರಜ್ಞಾನಂದ ನಿರ್ಣಾಯಕ ಹಂತದಲ್ಲಿ ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ವಿಶ್ವ ನಂ. 1 ಮ್ಯಾಗ್ನಸ್​ ಕಾರ್ಲ್​ಸೆನ್​ ವಿರುದ್ಧದ ಪ್ರಶಸ್ತಿ ಸುತ್ತಿನ ಹೋರಾಟದ ಟೈ ಬ್ರೇಕರ್​ನಲ್ಲಿ ಎಡವಿದ ಪ್ರಜ್ಞಾನಂದ 0.5-1.5ರಿಂದ ತಮ್ಮ ಸೋಲನ್ನು ಒಪ್ಪಿಕೊಂಡಿದ್ದಾರೆ.

ಫೈನಲ್​ ಪಂದ್ಯ ಟೈಬ್ರೇಕರ್​ಗೆ ವಿಸ್ತರಿಸಿದಾಗ ಪ್ರಜ್ಞಾನಂದ ಅವರೇ ಫೇವರಿಟ್​ ಎಂದು ಭಾವಿಸಲಾಗಿತ್ತು. ಯಾಕೆಂದರೆ ಈ ಮುನ್ನ ಕ್ವಾರ್ಟರ್​ಫೈ​ನಲ್​ ಮತ್ತು ಸೆಮಿಫೈನಲ್​ನಲ್ಲೂ ಅವರು ಟೈಬ್ರೇಕರ್​ನಲ್ಲೇ ಗೆಲುವು ಒಲಿಸಿಕೊಂಡಿದ್ದರು ಮತ್ತು ರ್ಯಾಪಿಡ್​ ಚೆಸ್​ ಅವರ ನೆಚ್ಚಿನ ಆಟವೂ ಆಗಿತ್ತು.

ಆದರೆ ಫೈನಲ್​ ಪಂದ್ಯದಲ್ಲಿ ಉತ್ತಮ ಸ್ಥಿತಿಯಲ್ಲಿದ್ದಾಗ ‘ಸೈನಿಕ’ನನ್ನು ಎಫ್​​5ನಲ್ಲಿ ನಿಲ್ಲಿಸುವ ಮೂಲಕ ಪ್ರಜ್ಞಾನಂದ ಬಹುದೊಡ್ಡ ಎಡವಟ್ಟು ಮಾಡಿಕೊಂಡರು. ಇದು ಕಾರ್ಲ್​ಸೆನ್​ಗೆ ಗೆಲುವು ಸಾಧಿಸಲು ನೆರವಾಯಿತು. ಇದರಿಂದಾಗಿ ಪ್ರಜ್ಞಾನಂದಗೆ ಪಂದ್ಯ ಕೈಜಾರುತ್ತಿರುವ ಅರಿವು ಕೂಡ ಆಗಿ ಗೆಲುವು ಬಿಟ್ಟುಕೊಟ್ಟರು.

RELATED ARTICLES

Related Articles

TRENDING ARTICLES