Sunday, November 3, 2024

ತೀವ್ರ ಜ್ವರದಿಂದ ಮಗು ಸಾವು ; ವೈದ್ಯರ ನಿರ್ಲಕ್ಷ ಆರೋಪ

ತುಮಕೂರು : ತೀವ್ರ ಜ್ವರದಿಂದ ಸಾವನ್ನಪ್ಪಿದ ಮಗು ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ವೆಂಕಟೇಗೌಡನ ಪಾಳ್ಯದಲ್ಲಿ ನಡೆದಿದೆ.

ವೆಂಕಟೇಶಗೌಡನ ಪಾಳ್ಯದ ನಿವಾಸಿ ಸತೀಶ್ ಮತ್ತು ಶಿಲ್ಪಾ ದಂಪತಿಗಳ ಪುತ್ರಿ ತನು (5) ಮೃತ ದುರ್ದೈವಿ. ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ತನುಗೆ ಜ್ವರ ಕಾಣಿಸಿಕೊಂಡಿದ್ದು, ತಕ್ಷಣ ಸಿ.ಎಸ್. ಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದ ಪೋಷಕರು. ಹಲವು ಗಂಟೆಗಳ ಕಾಲ ವೈದ್ಯರಿಗೆ ಕಾದರೂ ಆಸ್ಪತ್ರೆಗೆ ಬಾರದ ವೈದ್ಯರು.

ಇದನ್ನು ಓದಿ : BIG DAY : ಆ.. ಎರಡು ದಿಗ್ವಿಜಯಕ್ಕೆ ಇಡೀ ಭಾರತ ಕಾತುರ!

ಈ ವೇಳೆ ಆಸ್ಪತ್ರೆಯಲ್ಲಿ ಮಗು ಸುಸ್ತಾಗಿ ನರಳಾಡುತ್ತಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ ಗುಬ್ಬಿ ತಾಲೂಕು ಆಸ್ಪತ್ರೆ ವೈದ್ಯರು. ದುರಾದೃಷ್ಟವಶಾತ್ ಬೆಂಗಳೂರಿಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ.

ಮಗುವನ್ನು ಕಳೆದುಕೊಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಬಳಿಕ ಸಿ.ಎಸ್.ಪುರದ 24/7 ಪ್ರಾಥಮಿಕ ಆರೋಗ್ಯ ಕೇಂದ್ರವಾಗಿದ್ದು, ಆಸ್ಪತ್ರೆಯಲ್ಲಿ ವೈದ್ಯರು ಇದ್ದಿದ್ದರೆ ನಮ್ಮ ಮಗು ಸಾವನ್ನಪ್ಪುತ್ತಿರಲಿಲ್ಲ. ವೈದ್ಯರ ನಿರ್ಲಕ್ಷವೇ ಮಗು ಸಾವಿಗೆ ಕಾರಣ ಎಂದು ಆರೋಪ ಮಾಡಿರುವ ಮೃತ ಮಗುವಿನ ಪೋಷಕರು. ಈ ಘಟನಾ ಸಂಬಂಧ ಸಿ.ಎಸ್ ಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES