ಬೆಂಗಳೂರು : ವಲಸಿಗ ಶಾಸಕರ ಪಕ್ಷ ಸೇರ್ಪಡೆಗೆ ಆಪರೇಷನ್ ಹಸ್ತ ನಡೆಯುತ್ತಿದೆ ಎಂಬ ವದಂತಿ ಬಗ್ಗೆ ಮಾಜಿ ಸಚಿವ ಬಿ.ಸಿ ಪಾಟೀಲ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್ನಲ್ಲಿ ಮೂರು ಗುಂಪು ಆಗಿದಾವೆ. ಪರಮೇಶ್ವರ್ ಅವರದ್ದು, ಸಿದ್ದರಾಮಯ್ಯನವರದ್ದು, ಡಿ.ಕೆ ಶಿವಕುಮಾರ್ ಅವರದ್ದು ಅಂತ ಗುಂಪು ಇವೆ. ಚುನಾವಣೆ ಬರ್ತಾ ಇದೆ, ಗಮನ ಬೇರೆಡೆ ಸೆಳೆಯಲು ಈ ರೀತಿ ಮಾಡ್ತಿದಾರೆ ಎಂದು ಕುಟುಕಿದ್ದಾರೆ.
ಕಾಂಗ್ರೆಸ್ ಪಕ್ಷದವರದ್ದು ಹಾಸ್ಯಸ್ಪದ ನಡೆಯಾಗಿದೆ. ಬೇರೆ ಪಕ್ಷದಿಂದ ಶಾಸಕರನ್ನು ಕೆರೆ ತರುತ್ತಿದ್ದಾರೆ. ಇದರಲ್ಲೇ ಗೊತ್ತಾಗ್ತಾ ಇದೆ, ಅಲ್ಲಿ ಎಲ್ಲವೂ ಸರಿಯಿಲ್ಲ ಅಂತ. ನಾವು ಪಕ್ಷ ಬಿಟ್ಟು ಬಾಂಬೆಗೆ ಹೋದಾಗ ಸಿದ್ದರಾಮಯ್ಯ ಹೇಳಿದ್ದರು. ಸೂರ್ಯ ಚಂದ್ರ ಇರುವ ತನಕ 17 ಶಾಸಕರನ್ನು ಕರೆದುಕೊಳ್ಳಲ್ಲ ಎಂದವ್ರು, ಈಗ ಯಾಕೆ ಕರೆದುಕೊಳ್ತಾ ಇದಾರೆ ಎಂದು ಗುಡುಗಿದ್ದಾರೆ.
ನಾನು ಹಳೇ ಕಾಂಗ್ರೆಸ್ಸಿಗ
ಈಗ 136 ಶಾಸಕರಿದ್ದರು ಕೂಡಾ ಕರೆತರಲು ಯತ್ನ ನಡೆಯುತ್ತಿದೆ. ಅಲ್ಲಿ ಅಭದ್ರತೆ ಕಾಡ್ತಾ ಇದೆ. ಎಸ್.ಟಿ ಸೋಮಶೇಖರ್ ಎರಡು ದಿನಗಳ ಹಿಂದೆ ಬಿಜೆಪಿ ಸಭೆಯಲ್ಲಿ ಭಾಗಿಯಾಗಿದ್ದಾರೆ. ನಾನು ಪೋನ್ ಮಾಡಿ ಮಾತಾಡಿದ್ದೇನೆ. ನಾನು ಹಳೆ ಕಾಂಗ್ರೆಸ್ಸಿಗ. ಹೀಗಾಗಿ, ಕ್ಷೇತ್ರಕ್ಕೆ ಬಂದಾಗ ಮಾತಾಡಿದ್ದೇನೆ. ಇದನ್ನು ಸುಮ್ಮನೆ ದೊಡ್ಡದು ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.