ಮಂಡ್ಯ : ರಾತ್ರೋರಾತ್ರಿ ಪೆಟ್ರೋಲ್ ಬಂಕ್ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು ಬಂಕ್ನಲ್ಲಿದ್ದ ಪೆಟ್ರೋಲ್ ಮತ್ತು ಡೀಸೆಲ್ ನ್ನು ಹೊರಗೆ ಬಿಟ್ಟು ಧ್ವಂಸ ಮಾಡಿದ ಪಾಂಡವಪುರ ತಾಲ್ಲೂಕನ ಬೇಬಿ ಗ್ರಾಮದಲ್ಲಿ ನಡೆದಿದೆ.
ಭಸ್ತಿರಂಗಪ್ಪ ಎಂಬುವವರಿಗೆ ಸೇರಿದ ಪೆಟ್ರೋಲ್ ಬಂಕ್ ಇದಾಗಿದ್ದು, ಕಳೆದ ರಾತ್ರಿ ಪೆಟ್ರೋಲ್ ಬಂಕ್ ಸಿಬ್ಬಂದಿ ಊಟಕ್ಕೆ ಹೋಗಿದ್ದ ವೇಳೆ ಹತ್ತು ಲಕ್ಷ ಮೌಲ್ಯದ ಸುಮಾರು ಎಂಟು ಸಾವಿರ ಲೀಟರ್ ಪೆಟ್ರೋಲ್ ಹಾಗು ಎರಡು ಸಾವಿರ ಲೀಟರ್ ಡೀಸೆಲನ್ನು ರಸ್ತೆಗೆ ಹರಿಬಿಟ್ಟು ಹಾಳುಮಾಡಿದ್ದಾರೆ.
ಇದನ್ನೂ ಓದಿ: ವಿಚಾರಣೆ ಬಂದ ಪೊಲೀಸರ ಮೇಲೆ ಸೀಮೆ ಎಣ್ಣೆ ಸುರಿದು ಹಲ್ಲೆಗೆ ಮುಂದಾದ ಮಹಿಳೆ!
ಕಳೆದ ಎರಡು ತಿಂಗಳ ಹಿಂದೆಯಷ್ಟೆ ಭಸ್ತಿರಂಗಪ್ಪ ಎಂಬುವವರು ಪೆಟ್ರೋಲ್ ಬಂಕ್ ಶುರುಮಾಡಿದ್ದರು, ಈ ದುಷ್ಕೃತ್ಯಕ್ಕೆ ಹಳೇ ದ್ವೇಶವೇ ಕಾರಣ ಎನ್ನಲಾಗುತ್ತಿದ್ದು ಸದ್ಯ ಈ ಪ್ರಕರಣವು ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.