ಕಾರವಾರ : ಹಲವು ದಿನಗಳಿಂದ ದೇವಸ್ಥಾನದ ಒಳಗೆ ಉಳಿದ ಹಾವೊಂದು ಇಂದು ಹೊರಗೆ ಬಂದಿದೆ ಘಟನೆ ಗೋಕರ್ಣದ ಶ್ರೀ ಮಹಾಬಲೇಶ್ವರ ಗರ್ಭಗುಡಿಯಲ್ಲಿ ನಡೆದಿದೆ.
ಸುಮಾರು ಐದು ದಿನಗಳಿಂದ ಗರ್ಭಗುಡಿಯ ಬಾಗಿಲಿನ ಮೇಲೆ ಠಿಕಾಣಿ ಹೂಡಿದ್ದ ಹಾವು. ಇಂದು ಬೆಳಗ್ಗೆ ತಾನೇ ಗರ್ಭಗುಡಿಯಿಂದ ಹೊರಗೆ ಬಂದಿರುವ ನಾಗರಾಜ.
ನಿನ್ನೆ ಸಂಜೆ ದೇವರ ದರ್ಶನಕ್ಕೆ ಭಕ್ತರನ್ನು ಬಿಡುವ ಸಮಯದಲ್ಲಿ ಹಾವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಉರಗ ತಜ್ಞರಾದ ಅಶೋಕ ನಾಯ್ಕ ತದಡಿ ಹಾಗೂ ಸ್ನೇಕ್ ಬಾಬಣ್ಣ ಎಂಬುವವರನ್ನು ಕರೆಸಿ ಹಾವನ್ನು ಹೊರತೆಗೆದು, ಸುರಕ್ಷಿತವಾಗಿ ಬಿಡಲು ನಿರಂತರ ಪ್ರಯತ್ನವನ್ನು ಮಾಡಿದ್ದರು.
ಇದನ್ನು ಓದಿ : ಕೆಆರ್ಎಸ್ ವೀಕ್ಷಣೆಗೆ ಬಂದ ಪ್ರವಾಸಿಗರ ಮೇಲೆ ಹುಚ್ಚುನಾಯಿಗಳು ದಾಳಿ!
ಆದರೆ ಬಾಗಿಲ ಮೇಲ್ಭಾಗದ ಚಿಕ್ಕ ಸಂಧಿಯಲ್ಲಿ ಹಾವು ಸೇರಿಕೊಂಡ ಹಿನ್ನೆಲೆ ಹೊರತೆಗೆಯಲು ಆಗಿರಲಿಲ್ಲ. ನಾಗರಾಜ ಗರ್ಭಗುಡಿಯಿಂದ ಹೊರಗೆ ಹೋಗಿರುವ ದೃಶ್ಯ ಸಿ.ಸಿ.ಟಿವಿಯಲ್ಲಿ ಸೆರೆಯಾಗಿದೆ. ಈ ಮೂಲಕ ದೇವಸ್ಥಾನದ ಆಡಳಿತ ಮತ್ತು ಸಿಬ್ಬಂದಿಗಳಿಗಿದ್ದ ಆತಂಕ ದೂರವಾಗಿದೆ.