ಬೆಂಗಳೂರು : ತುಳುಕೂಟಕ್ಕೆ 50 ವರ್ಷವಾದ ಹಿನ್ನೆಲೆ ಕಂಬಳ ಉತ್ಸವಕ್ಕೆ ನಗರದ ಅರಮನೆ ಹಿಂಭಾಗವಿರುವ ಖಾಲಿ ಜಾಗದಲ್ಲಿ ನಡೆಸಲು ಸಕಲ ಸಿದ್ಧತೆ ನಡೆಯುತ್ತಿದೆ.
ಈ ಭಾರಿ ಕಂಬಳ ಉತ್ಸವವನ್ನು ಬೆಂಗಳೂರಿನಲ್ಲಿ ವಿಭಿನ್ನ ರೀತಿಯಿಂದ ಭರ್ಜರಿ ಸಿದ್ಧತೆ ನಡೆಸುತ್ತಿರುವ ನಗರದ ತುಳುಕೂಟ. ತುಳುಕೂಟಕ್ಕೆ 50 ವರ್ಷ ತುಂಬಿದ್ದು, ನವೆಂಬರ್ನಲ್ಲಿ ಮೂರು ದಿನ ವಿಶ್ವ ತುಳುಕೂಟ ಸಮ್ಮೇಳನ ಅಥವಾ ವಿಶ್ವ ಸಾಂಸ್ಕೃತಿಕ ದಿನ ಹೆಸರಿನಲ್ಲಿ ಕಣ್ಮನ ಸೆಳೆಯೋ ರೀತಿಯಲ್ಲಿ ಕಾರ್ಯಕ್ರಮವನ್ನು ನಡೆಸಲು ಉದ್ಯಾನಗರಿಯಲ್ಲಿ ಬೆಂಗಳೂರು ಸಜ್ಜಾಗುತ್ತಿದೆ.
ಇದನ್ನು ಓದಿ : ಆಸ್ತಿಗಾಗಿ ಉಪ್ಪಿಟ್ಟಿನಲ್ಲಿ ವಿಷಬೆರೆಸಿ ಗಂಡನಿಗೆ ತಿನಿಸಿದ ಐನಾತಿ ಹೆಂಡತಿ!
ಅಷ್ಟೇ ಅಲ್ಲದೆ ನವೆಂಬರ್ ಮೂರು ದಿನದಲ್ಲಿ ಹೆಚ್ಚಾಗಿ ಕರಾವಳಿ ಕ್ರೀಡೆಯದ್ದೇ ಸದ್ದು ನಡೆಯಲಿದೆ.ವೀರ ಕಂಬಳ ನೆಡೆಸಲು ಮಣ್ಣಿನ ಪರೀಕ್ಷೆ ಹಾಗೂ ನೀರಿನ ಪರೀಕ್ಷೆಯಾಗಿದ್ದು, ಇನ್ನೆರಡು ದಿನದಲ್ಲಿ ರಿಸಲ್ಟ್ ಬರಲಿದೆ.
ಏನೇನು ಸಿದ್ಧತೆಗಳು ನಡೆಯಲಿದೆ ?
ಈಗಾಗಲೇ ಕಂಬಳ ಆಯೋಜನೆ ಬಗ್ಗೆ ಕಂಬಳ ಸಮಿತಿಯೊಡನೆ ಎರಡು ಮತ್ತು ಮೂರು ಸುತ್ತಿನಲ್ಲಿ ಮಾತುಕತೆಯನ್ನು ಮಾಡಲಾಗಿದೆ. ಹಾಗೂ ಕರಾವಳಿಯಲ್ಲಿ ಚಾಪು ಮೂಡಿಸಿದ್ದ ಜೋಡಿ ಕೋಣಗಳು. ಈ ಭಾರೀ ಬೆಂಗಳೂರಿಗೆ ರೈಲು ಅಥವಾ ಲಾರಿಗಳಲ್ಲಿ ಬಂದಿಳಿಯುತ್ತಿರುವ 50 ಜೋಡಿ ಕೋಣಗಳು. ಕಂಬಳದ ಜೊತೆ ಯಕ್ಷಗಾನ ಸೇರಿದಂತೆ ಕರಾವಳಿಯ ಹಲವು ವಿಶೇಷ ಕಲೆಗಳ ಅನಾವರಣ ನಡೆಯಲಿದೆ.
ತುಳುಕೂಟ ಸಂಭ್ರಮದಲ್ಲಿ ಅನುಷ್ಕಾ ಶೆಟ್ಟಿ, ಶಿಲ್ಪ ಶೆಟ್ಟಿ, ಸುನೀಲ್ ಶೆಟ್ಟಿ ಜೊತೆಗೆ ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಎಲ್ಲರೂ ಬರುವ ಸಾಧ್ಯತೆ ಕೂಡ ಇದೆ. ಅಷ್ಟೇ ಅಲ್ಲದೆ ಕರ್ನಾಟಕವಷ್ಟೇ ಅಲ್ಲದೇ ವಿವಿಧ ದೇಶದ ಸುಮಾರು 2000 ತುಳುಕೂಟದ ಪ್ರತಿನಿಧಿಗಳು ಕಂಬಳ ಉತ್ಸವದಲ್ಲಿ ಭಾಗಿಯಾಗುವ ಸಾಧ್ಯತೆ ಕೂಡಯಿದೆ ಎಂದು ಬೆಂಗಳೂರು ತುಳುಕೂಟ ಮಾಹಿತಿಯನ್ನು ನೀಡಿದೆ.