ಬೆಂಗಳೂರು : ರಸ್ತೆ ಬದಿಯಲ್ಲಿ ನಿಂತು ಟೀ ಮಾರುತ್ತಿದ್ದವನ ಕಿಡ್ನಾಪ್ ಮಾಡಿ 15 ಲಕ್ಷ ಸುಲಿಗೆ ಮಾಡಿದ್ದರು. ಆರೋಪಿಗಳನ್ನು ಬಂಧಿಸಿದ ಹನುಮಂತನಗರ ಠಾಣೆ ಪೋಲಿಸರು.
ತಿಲಕ್ ಮಣಿಕಂಠ ಎಂಬ ವ್ಯಕ್ತಿ ರಸ್ತೆ ಬದಿಯಲ್ಲಿ ಟೀ ಮಾರಿ ಜೀವನ ನೆಡೆಸುತ್ತಿದ್ದನು. ಆಗಸ್ಟ್ 1 ರಂದು ಗೋವಾಗೆ ತೆರಳಿದ್ದ ತಿಲಕ್, ಕ್ಯಾಸಿನೊದಲ್ಲಿ 25 ಲಕ್ಷ ಗೆದ್ದಿದ್ದನು. ಆ ವಿಚಾರವನ್ನು ಹೇಗೋ ಅವನ ಸ್ನೇಹಿತರು ತಿಳಿದುಕೊಂಡಿದ್ದು, ಈ ಹಿನ್ನೆಲೆ ಆಗಸ್ಟ್ 5 ರಂದು ತಿಲಕ್ ಮಣಿಕಂಠನನ್ನು ಕಿಡ್ನಾಪ್ ಮಾಡಿದ್ದರು.
ಇದನ್ನು ಓದಿ : ಆಟೋ ಮತ್ತು KSRTC ಬಸ್ ಮಧ್ಯೆ ಭೀಕರ ಅಪಘಾತ; ಆಟೋ ಚಾಲಕ ಸಾವು
ಬಳಿಕ ಕಿಡ್ನಾಪ್ ಮಾಡಿ ತಿಲಕ್ ಬಳಿ 15 ಲಕ್ಷ ಹಣವನ್ನು ಸುಲಿಗೆ ಮಾಡಿದ್ದಾರೆ. ಹಣ ತೆಗೆದುಕೊಂಡ ಮೇಲೆ ಆಗಸ್ಟ್ 6 ರಂದು ತಿಲಕ್ನನ್ನ ಬಿಟ್ಟು ಕಳಿಸಿದ ಆರೋಪಿಗಳು. ಆಚೆ ಬಂದ ತಕ್ಷಣ ಘಟನೆ ಸಂಬಂಧ ಹನುಮಂತನಗರ ಪೋಲಿಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ ತಿಲಕ್.
ಈ ವಿಚಾರ ತಿಳಿಯುತ್ತಿದ್ದಂತೆ ಹಣದ ಜೊತೆಗೆ ಪರಾರಿಯಾಗಿ, ಗೋವಾ, ಬಾಂಬೆ ಅಂತ ಎಲ್ಲಾ ಕಡೆ ತೆರಳಿ ತಲೆಮರೆಸಿಕೊಂಡಿದ್ದ ಆರೋಪಿಗಳು. ಕೊನೆಗೂ ಶಿರಡಿಯಲ್ಲಿ ಕಾರ್ತಿಕ್ ,ರಾಹುಲ್ ಸೇರಿ 8 ಜನರ ಬಂಧನ ಮಾಡಿದ ಪೋಲಿಸ್. ಬಳಿಕ ಆರೋಪಿಗಳಿಂದ 10 ಲಕ್ಷ ಹಣ ವಶಕ್ಕೆ ಪಡೆದ ಖಾಕಿ ಪಡೆ.