ಬೆಂಗಳೂರು : ಮನೆ ಮಾಲೀಕನ ಲೋನ್ನಿಂದ ಬಾಡಿಗೆದಾರನ ಗಮನಿಸದೇ ಮನೆ ಸೀಜ್ ಮಾಡಿದ ಬ್ಯಾಂಕ್ ಸಿಬ್ಬಂದಿಗಳು ಘಟನೆ ಕೆಂಗೇರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೆಂಗೇರಿ ಉಪನಗರದಲ್ಲಿರುವ ಮೂರಂತಸ್ಥಿನ ಮನೆಯ ಮಾಲೀಕನೊಬ್ಬ ತುಮಕೂರಿನ ವೀರಶೈವ ಕೋ ಆಪರೇಟಿವ್ ಬ್ಯಾಂಕ್ನಲ್ಲಿ 2 ಕೋಟಿ ಸಾಲ ಪಡೆದಿದ್ದನು. ಆದ್ರೆ ಲೋನ್ ಹಣವನ್ನು ವಾಪಸ್ ಕಟ್ಟಿರಲಿಲ್ಲ. ಈ ಹಿನ್ನೆಲೆ ಕೋರ್ಟ್ ನಿಂದ ಅನುಮತಿ ಪಡೆದು ಮನೆ ಸೀಜ್ ಮಾಡಲು ಬಂದಿದ್ದ ಸಿಬ್ಬಂದಿಗಳು.
ಇದನ್ನು ಓದಿ : ತಿಪಟೂರು ತಾಲೂಕು ಆಸ್ಪತ್ರೆಯಲ್ಲಿ ಕೇಳೋರಿಲ್ಲ ರೋಗಿಗಳ ಪಾಡು
ಈ ವೇಳೆ ಬ್ಯಾಂಕ್ ಸಿಬ್ಬಂದಿಗಳ ಎಡವಟ್ಟಿನಿಂದ ಮನೆಯಲ್ಲಿ ಮಲಗಿದ್ದ ಬಾಡಿಗೆದಾರನನ್ನು ಗಮನಿಸದೆ ಮನೆ ಸೀಜ್ ಮಾಡಿದ್ದಾರೆ. ಈ ಘಟನೆ ಬಗ್ಗೆ ಬಾಡಿಗೆದಾರರ ಸಂಬಂಧಿ ಪ್ರಸನ್ನ ಹೇಳಿಕೆ ನೀಡಿದ್ದು, ಮೂರು ತಿಂಗಳ ಹಿಂದೆ ನಮ್ಮ ತಂಗಿ 10 ಲಕ್ಷಕ್ಕೆ ಲೀಸ್ ಹಾಕಿಕೊಂಡಿದ್ದರು.
ಆದರೆ ಈಗ ಯಾವುದೇ ಮಾಹಿತಿ ನೀಡದೆ ವೀರಶೈವ ಕೋ ಆಪರೇಟಿವ್ ಬ್ಯಾಂಕ್ ನಿಂದ ಸೀಜ್ ಮಾಡಲಾಗಿದೆ. ಸೀಜ್ ಮಾಡುವ ವೇಳೆ ಮನೆಯಲ್ಲಿ ಮಗ ಇದ್ದಿದ್ದನು ಗಮನಿಸದೇ ಸೀಜ್ ಆಗಿದೆ. ಬಳಿಕ ಮಗ ಒಳಗಡೆ ಇದ್ದಾನೆ ಎಂದು ಠಾಣೆಗೆ ಮಾಹಿತಿ ನೀಡಿ ಹೊರ ಕರ್ಕೊಂಡು ಬಂದಿದ್ದೇವೆ ಎಂದರು.