ಧಾರವಾಡ : ಲಾರಿ ಚಾಲಕನ ನಿರ್ಲಕ್ಷದಿಂದ ಅಂಡರ್ ಪಾಸ್ನಲ್ಲಿ ಸಿಲುಕಿಕೊಂಡ ಗ್ಯಾಸ್ ಟ್ಯಾಂಕರ್ ಘಟನೆ ತಾಲೂಕಿನ ಮುಮ್ಮಿಗಟ್ಟಿ ಬಳಿ ಇರುವ ಹೈಕೋರ್ಟ್ ಅಂಡರ್ ಪಾಸ್ನಲ್ಲಿ ನಡೆದಿದೆ.
ಲಾರಿ ಚಾಲಕನ ಬೇಜವಾಬ್ದಾರಿಯಿಂದ ಅಂಡರ್ ಪಾಸ್ನಲ್ಲಿ ಹೋಗುವ ವೇಳೆ ಲಾಕ್ ಆದ ಗ್ಯಾಸ್ ಟ್ಯಾಂಕರ್. ಎರಡು ಘಂಟೆಯಿಂದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ರಸ್ತೆ ಸ್ಥಗಿತಗೊಂಡಿತ್ತು. ಈ ಹಿನ್ನೆಲೆ ಯಾವುದೇ ಅಹಿತಕರ ಘಟನೆಗಳು ನಡೆಯಬಾರದೆಂದು ಮುಮ್ಮಿಗಟ್ಟಿ, ಬೇಲೂರು ಹಾಗೂ ಕೋಟೂರು ಗ್ರಾಮಗಳಲ್ಲಿ ವಿದ್ಯುತ್ ಸ್ಥಗಿತಗೊಳಿಸಲಾಗಿದೆ.
ಇದನ್ನು ಓದಿ : I.N.D.I.A.ಗೆ ಸ್ಟಾರ್ಟಿಂಗ್ ಟ್ರಬಲ್ : 7 ಕ್ಷೇತ್ರಗಳಲ್ಲಿ ‘ಕೈ’ ಏಕಾಂಗಿ ಸ್ಪರ್ಧೆ?
ಬಳಿಕ ಸ್ಥಳಕ್ಕೆ ಅಗ್ನಿ ಶಾಮಕ ದಳದ 10 ವಾಹನಗಳು ಆಗಮಿಸಿದವು. ಅಷ್ಟೇ ಅಲ್ಲದೆ 100 ಕ್ಕೂ ಹೆಚ್ಚು ಪೋಲಿಸರನ್ನು ನಿಯೋಜನೆ ಮಾಡಲಾಗಿದ್ದು, ಧಾರವಾಢ ಹೈಕೋರ್ಟ್ ಸ್ಥಳದಿಂದ ಎರಡು ಕಿಲೋ ಮೀಟರ್ ಬಿಗಿ ಭದ್ರತೆ ಮಾಡಲಾಗಿದೆ. ಗರಗ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಕಂಡುಬಂದಿದೆ.