Friday, January 24, 2025

ದೇವಸ್ಥಾನದ ಹುಂಡಿ ಹಣ ಕಳವು

ಮಂಡ್ಯ : ದೇವಸ್ಥಾನದ ಬೀಗ ಮುರಿದು ಹುಂಡಿ ದೋಚಿರುವ ಕದೀಮರು ಘಟನೆ ಜಿಲ್ಲೆಯ ಗಾಂಧಿನಗರದ 6ನೇ ಕ್ರಾಸ್​ನಲ್ಲಿ ನಡೆದಿದೆ.

ನಿನ್ನೆ ತಡರಾತ್ರಿಯಲ್ಲಿ ನಗರದ ಕಾಳಮ್ಮ ದೇವಾಲಯದ ಬೀಗ ಮುರಿದು ಒಳ ನುಗ್ಗಿದ್ದ ಕಳ್ಳರ ಗುಂಪು. ಗರ್ಭಗುಡಿ ಒಳಗಿದ್ದ ದೇವರ ಹುಂಡಿಯನ್ನು ಹೊತ್ತೊಯ್ದಿದ್ದಾರೆ.

ಇದನ್ನು ಓದಿ : ನಟ ಉಪೇಂದ್ರ ಅವಹೇಳನಕಾರಿ ಹೇಳಿಕೆ ಸಹಿಸುವುದಿಲ್ಲ: ಸಚಿವ ಪರಮೇಶ್ವರ್​

ಬಳಿಕ ಹುಂಡಿಯ ಕೀಲಿ ಮುರಿದು ಅದರಲ್ಲಿದ್ದ ಸುಮಾರು 1.50 ಲಕ್ಷ ಹಣ ದೋಚಿ, ದೇವಸ್ಥಾನದ ಪಕ್ಕದಲ್ಲಿ ಹುಂಡಿಯನ್ನು ಬಿಸಾಡಿ ಪರಾರಿಯಾಗಿರುವ ಕದೀಮರು. ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಂಡ್ಯ ಪಶ್ಚಿಮ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

RELATED ARTICLES

Related Articles

TRENDING ARTICLES