ಬೆಂಗಳೂರು : ಸಮಾಜ ವಿರೋಧ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದಡಿ ಹಿಂದೂ ಸಂಘಟನೆ ಮುಖಂಡ ಪುನೀತ್ ಕೆರೆಹಳ್ಳಿಗೆ ಸಂಕಷ್ಟ ಎದುರಾಗಿದ್ದು ಗೂಂಡಾ ಕಾಯ್ದೆ ಕೇಸ್ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಅಕ್ರಮ ಕಟ್ಟಡ ನಿರ್ಮಾಣಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಸಿದ್ದತೆ: ಪರಿಸರವಾದಿಗಳ ಆರೋಪ!
ಈಗಾಗಲೇ ರಾಬರಿ, ದಬ್ಬಾಳಿಕೆ, ಹಲ್ಲೆ ಸೇರಿ ವಿವಿಧ ಪ್ರಕರಣದಲ್ಲಿ ಭಾಗಿಯಾಗಿರೋ ಪುನೀತ್ ಕೆರೆಹಳ್ಳಿ ವಿರುದ್ದ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿವೆ. ಹೋರಾಟದ ಹೆಸರಿನಲ್ಲಿ ದಾಂಧಲೆ ಮಾಡಿರೋ ಆರೋಪ, ಹಿಜಾಬ್, ಹಲಾಲ್ಕಟ್ ಹೋರಾಟದಲ್ಲಿ ಭಾಗಿಯಾಗಿ ಹಲವು ಗಣ್ಯರ ಫ್ಲೆಕ್ಸ್ ಹರಿದು ಗಲಾಟೆ ಸೇರಿದಂದೆ 10 ಹೆಚ್ಚು ಪ್ರಕರಣಗಳು ದಾಖಲಾಗಿದೆ. ಈತನನ್ನು ಸಿಸಿಬಿ ಪೊಲೀಸರು ಗೂಂಡಾ ಕಾಯ್ದೆ ಅಡಿ ಬಂಧಿಸಿದ್ದಾರೆ.
ಪುನೀತ್ ಕೆರೆಹಳ್ಳಿ ಸಮಾಜ ವಿರೋಧಿ ಚಟುವಟಿಕೆಗಳನ್ನು ತಡೆಯುವ ಸಲುವಾಗಿ ಕರ್ನಾಟಕ ಗೂಂಡಾ ಕಾಯಿದೆ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಸಿಸಿಬಿ ಪೊಲೀಸರು ಈತನನ್ನು ಬಂಧಿಸಿ ಸದ್ಯ ಪರಪ್ಪನ ಆಗ್ರಹಾರ ಕಾರಗೃಹಕ್ಕೆ ಕಳಿಸಲಾಗಿದೆ.