Monday, January 20, 2025

BBMP ಮುಖ್ಯ ಕಚೇರಿಗೆ ಬೆಂಕಿ; 8 ರಿಂದ 10 ಸಿಬ್ಬಂದಿ ಗಂಭೀರ ಗಾಯ

ಬೆಂಗಳೂರು : ಬಿಬಿಎಂಪಿ ಮುಖ್ಯ ಕಛೇರಿ ಆವರಣದ ಕಟ್ಟಡವೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಘಟನೆಯಿಂದ ಸುಮಾರು 8 ರಿಂದ 10 ನೌಕರರಿಗೆ ಗಂಭಿರ ಗಾಯಗೊಂಡಿದ್ದಾರೆ.

ಬೆಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಯ ಅನೆಕ್ಸ್ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿ ಅನಾಹುತ ಅರ್ಧ ಗಂಟೆಯ ಬಳಿಕ ಬೆಂಕಿಯನ್ನು ತಹಬದಿಗೆ ತರಲು ಅಗ್ನಿಶಾಮಕ ಸಿಬ್ಬಂದಿಗಳಿಗೆ ಹರಸಾಹಸ ಪಟ್ಟಿದ್ದಾರೆ.

ಇದನ್ನು ಓದಿ : ಜೋಡೆತ್ತು ಕಳ್ಳತನ; ಜಾಣ ಎತ್ತುಗಳು ರೈತನ ಮನೆಗೆ ಸೇರಿದ್ದೆ ರೋಚಕ!

ಬೆಂಜಿನ್ ಕೆಮಿಕಲ್ ಟೆಸ್ಟ್ ಮಾಡುವ ವೇಳೆ ಬ್ಲಾಸ್ಟ್

ಇನ್ನು ಘಟನಾ ಸ್ಥಳಕ್ಕೆ ಬೆಂಗಳೂರು ಹೆಚ್ಚುವರಿ ಕಮೀಷನರ್​ ಎಸ್​ ಸತೀಶ್​ ಕುಮಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಬೆಂಜಿನ್ ಕೆಮಿಕಲ್ ಟೆಸ್ಟ್ ಮಾಡುತ್ತಿದ್ದ ವೇಳೆ ಬ್ಲಾಸ್ಟ್ ಆಗಿದೆ. ಕೆಮಿಕಲ್ ಟೆಸ್ಟ್ ಮಾಡುವ ವೇಳೆ ಬ್ಲಾಸ್ಟ್ ಆಗಿದ್ದು, 4 ಜನರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನ ಸೆಂಟ್ ಮಾರ್ಥಾಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಅದೇ ವೇಳೆ ಮಾತನಾಡಿದ ಅವರು, ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಅವರು, ಈ ಅವಘಡ ಸಂಜೆ 5 ಗಂಟೆಗೆ ನಡೆದಿದ್ದು, ನಾವೆಲ್ಲ ಕಚೇರಿಯಲ್ಲಿದ್ದ ವೇಳೆ ಕರೆಂಟ್ ಇರಲಿಲ್ಲ. ತಕ್ಷಣ ವಿಚಾರಿಸಿದಾಗ ಅಗ್ನಿ ಅವಘಡ ನಡೆದ ಬಗ್ಗೆ ಮಾಹಿತಿ ತಿಳಿಯಿತು. ಒಟ್ಟು 8 ಮಂದಿಗೆ ಗಾಯವಾಗಿದ್ದು, ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಈ ಘಟನೆಗೆ ನಿಖರ ಕಾರಣ ತನಿಖೆಯಲ್ಲಿ ಗೊತ್ತಾಗುತ್ತದೆ. ಆದರೆ, ಈಗ ನಾವು ಸಿಬ್ಬಂದಿಗಳ ಜೀವ ಉಳಿಸುವುದಕ್ಕೆ ಪ್ರಯತ್ನಿಸಲಾಗಿದೆ ಎಂದಿದ್ದಾರೆ.

RELATED ARTICLES

Related Articles

TRENDING ARTICLES