Wednesday, February 5, 2025

ಚಿತ್ರ ನಿರ್ಮಾಪಕನ ಮನೆಯಲ್ಲಿ ಕಳ್ಳತನ : ಚಿನ್ನಾಭರಣ ದೋಚಿ ಪರಾರಿಯಾದ ಕಳ್ಳರು

ಮಂಡ್ಯ : ಚಿತ್ರ ನಿರ್ಮಾಪಕರೊಬ್ಬರ ಮನೆಯ ಬಾಗಿಲು ಮುರಿದು ಕಳ್ಳತನ ಮಾಡಿರುವ ಕದೀಮರು ಘಟನೆ ತಾಲೂಕಿನ ಹೊಸ ಬೂದುನೂರು ಗ್ರಾಮದಲ್ಲಿ ನಡೆದಿದೆ.

ಚಿತ್ರ ನಿರ್ಮಾಪಕ ಚಂದ್ರಶೇಖರ್ ಎಂಬುವವರು ಬೆಂಗಳೂರಿನಲ್ಲಿ ವಾಸವಾಗಿದ್ದು, ವಾರಂತ್ಯದಲ್ಲಿ ಒಂದರೆಡು ದಿನ ಗ್ರಾಮದ ಮನೆಗೆ ಬಂದು ನೆಲೆಸಿ ತೆರಳುತ್ತಿದ್ದರು. ಈ ವೇಳೆ ಕಳೆದ ಶನಿವಾರ ಮನೆಯಿಂದ ಬೆಂಗಳೂರಿಗೆ ತೆರಳಿದ್ದರು. ಈ ಸಮಯದಲ್ಲಿ ರಾತ್ರಿ ಮನೆಗೆ ನುಗ್ಗಿದ ಕಳ್ಳರ ಗುಂಪು.

ಇದನ್ನು ಓದಿ : ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ ; ಸ್ಥಳದಲ್ಲೇ ಮೃತಪಟ್ಟ ಸವಾರ

ಬಾಗಿಲು ಮುರಿದು ನುಗ್ಗಿದ ಕಳ್ಳರು ಮನೆಯಲ್ಲಿದ್ದ ಸುಮಾರು 3 ಲಕ್ಷ ನಗದು, ಮತ್ತು 35 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ತಮ್ಮ ಕೈಚಳಕ ಸಿಸಿ ಕ್ಯಾಮೆರದಲ್ಲಿ ಸೆರೆಯಾಗಿರುತ್ತದೆ ಎಂಬ ಅರಿವಿನಿಂದ ಚಿನ್ನಾಭರಣಗಳ ಜೊತೆಗೆ ಸಿಸಿ ಕ್ಯಾಮರಾದ ಡಿವಿಡ್’ಗಳನ್ನು ಕದ್ದೊಯ್ದಿರುವ ಕದೀಮರು.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಜೊತೆಗೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸಹ ಭೇಟಿ ನೀಡಿ  ಪರಿಶೀಲನೆ ನಡೆಸಿದ್ದಾರೆ. ಈ ಹಿನ್ನೆಲೆ ಮಂಡ್ಯ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

RELATED ARTICLES

Related Articles

TRENDING ARTICLES