Saturday, November 2, 2024

ಪೇಡಿಸಿಎಂ ಮತ್ತು ಪೇಸಿಎಸ್​ ಅಭಿಯಾನಕ್ಕೆ ಮುಂದಾದ ಬಿಜೆಪಿ ಪಕ್ಷ!

ಬೆಂಗಳೂರು : ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ದ ಬಿಜೆಪಿ ಸಮರ ಸಾರಿದ್ದು ಡಿಜಿಟಲ್​ ಸಮರಕ್ಕೆ ಮುಂದಾಗಿದ್ದು, ಪೇ-ಡಿಸಿಎಂ (Pay-DCM) ಮತ್ತು ಪೇ-ಸಿಎಸ್​ (Pay-CS) ಅಭಿಯಾನ ಮಾಡಲು ತಯಾರಿ ನಡೆಸಿದೆ.

ಇದನ್ನೂ ಓದಿ: ಮುಖ್ಯಮಂತ್ರಿ ಪರಿಹಾರ ನಿಧಿಗೆ 4 ಕೋಟಿ ಚೆಕ್​ ವಿತರಣೆ!

ಉಪ ಮುಖ್ಯಮಂತ್ರಿ ಹಾಗು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ದ ಬಿಲ್ ಕ್ಲಿಯರ್ ಮಾಡಲು ಕಮೀಷನ್ ‌ಕೇಳಿದ ಆರೋಪಕ್ಕೆ ಸಂಬಂಧಿಸಿ ರಾಜ್ಯಪಾಲರಿಗೂ ದೂರು ನೀಡಲು ಗುತ್ತಿಗೆದಾರರಿಗೆ ಮುಂದಾಗಿದ್ದಾರೆ,

ಇದೇ ವೇಳೆ ಕೃಷಿ‌ ಸಚಿವ ಚಲುರಾಯಸ್ವಾಮಿ ವಿರುದ್ದವೂ ಕೃಷಿ ಅಧಿಕಾರಿಗಳಿಂದ ವರ್ಗಾವಣೆಗೆ ಸಂಬಂಧಿಸಿ 6-8 ಲಕ್ಷ ರೂ ಲಂಚ ಕೇಳುತ್ತಿರುವ ಆರೋಪ ಕೇಳಿಬಂದಿತ್ತು.

ಇದೇ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ಪಕ್ಷ, ಈ ಹಿಂದೆ ಬಿಜೆಪಿ ಅಧಿಕಾರವಧಿಯಲ್ಲಿ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ದ ಭ್ರಷ್ಟಾಚಾರ ಆರೋಪ ಮಾಡಿದ್ದ ಕಾಂಗ್ರೆಸ್​ ಸರ್ಕಾರ ಪೆಸಿಎಂ ಎನ್ನುವ ಕ್ಯು ಆರ್​ ಕೋಡ್​ ಅಭಿಯಾನವನ್ನು ಮಾಡಿ ಸಂಚಲನ ಉಂಟುಮಾಡಿತ್ತು, ಇದೀಗ ವಿರೋಧ ಪಕ್ಷದಲ್ಲಿರುವ ಬಿಜೆಪಿ ಪಕ್ಷವು ಕಾಂಗ್ರೆಸ್​ಗೆ ತಿರುಗುಬಾಣವಾಗಿ ಪೇ ಡಿಸಿಎಂ ,ಪೇ ಸಿಎಸ್ ಅಭಿಯಾನ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಿದೆ.

RELATED ARTICLES

Related Articles

TRENDING ARTICLES