ಬೆಂಗಳೂರು: ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆ.4ರಿಂದ 15 ರವರೆಗೆ ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗಿದ್ದು ಲಾಲ್‌ಬಾಗ್ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ. ಸಂಚಾರ ನಿರ್ಬಂಧದ ಹಿನ್ನೆಲ್ಲೆ ಸಾರ್ವಜನಿಕರು ಸಹಕರಿಸುವಂತೆ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್. ಅನುಚೇತ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ನಡುರಸ್ತೆಯಲ್ಲೇ ಓರ್ವ ಪುರುಷ, ಮೂವರು ಮಹಿಳೆಯರ ನಡುವೆ ಡಿಶುಂ.. ಡಿಶುಂ..!
ಮೆಟ್ರೋ, ಬಿಎಂಟಿಸಿ ಬಳಸಿ: ಲಾಲ್ ಬಾಗ್‌ನ ಫಲಪುಷ್ಪ ಪ್ರದರ್ಶನಕ್ಕೆ ಹೆಚ್ಚಿನ ಜನರು ಆಗಮಿಸುವ ಹಿನ್ನಲೆಯಲ್ಲಿ ಡಾ.ಮರಿಗೌಡ, ಲಾಲ್‌ಬಾಗ್ ಹಾಗೂ ಕೆ.ಎಚ್. ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗಲಿದೆ. ಹೀಗಾಗಿ ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸುವವರು ಬಿಎಂಟಿಸಿ ಬಸ್‌ಗಳು, ಮೆಟ್ರೋ ಹಾಗೂ ಕ್ಯಾಬ್‌ಗಳನ್ನು ಬಳಸುವಂತೆ ಜಂಟಿ ಆಯುಕ್ತರು ಮನವಿ ಮಾಡಿದ್ದಾರೆ.
ನಿಲುಗಡೆ ನಿಷೇಧಿತ ರಸ್ತೆಗಳು:
- ಡಾ| ಮರಿಗೌಡ ರಸ್ತೆ, ಲಾಲ್‌ಬಾಗ್ ಮುಖ್ಯದ್ವಾರದಿಂದ ನಿಮ್ಹಾನ್ಸ್ ರಸ್ತೆ
- ಕೆ.ಎಚ್.ರಸ್ತೆ ವೃತ್ತದಿಂದ ಶಾಂತಿನಗರ ಜಂಕ್ಷನ್‌ವರೆಗೆ
- ಲಾಲ್‌ಬಾಗ್ ರಸ್ತೆ, ಸುಬ್ಬಯ್ಯ ವೃತ್ತದಿಂದ ಲಾಲ್‌ಬಾಗ್ ಮುಖ್ಯದ್ವಾರ ಸಿದ್ದಯ್ಯ ರಸ್ತೆ, ಊರ್ವಶಿ ಚಿತ್ರಮಂದಿರ ಜಂಕ್ಷನ್‌ನಿಂದ ವಿಲ್ಸನ್ ಗಾರ್ಡನ್ 12ನೇ ಕ್ರಾಸ್‌ವರೆಗೆ
- ಬಿಎಂಟಿಸಿ ರಸ್ತೆ, ಕೃಂಬಿಗಲ್ ರಸ್ತೆಗಳು
- ಲಾಲ್‌ಬಾಗ್ ಪಶ್ಚಿಮದ್ವಾರದಿಂದ ಆರ್.ವಿ.ಟೀಚರ್ ಕಾಲೇಜ್‌ವರೆಗೆ
- ಆರ್.ವಿ.ಟೀಚರ್ ಕಾಲೇಜಿನಿಂದ ಅಶೋಕ ಪಿಲ್ಸರ್‌ವರೆಗೆ
- ಅಶೋಕ ಪಿಲ್ಲರ್‌ನಿಂದ ಸಿದ್ದಾಪುರ ಜಂಕ್ಷನ್ ವರೆಗೆ ರಸ್ತೆ ನಿಷೇಧಿತ