ಬೆಂಗಳೂರು : ತಿರುಪತಿಗೆ ಕೆಎಂಎಫ್ ತುಪ್ಪ ಟೆಂಡರ್ ರದ್ದು ವಿಚಾರಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇವ್ರ ಮಂತ್ರಿಗಳಿಗೆ ಲಡ್ಡು ಸಿಕ್ತಾ ಇಲ್ಲ, ತಿಮ್ಮಪ್ಪನಿಗೆ ಏನು ಲಡ್ಡು ಸಿಗುತ್ತೆ. ಶಾಸಕರಿಗೇ ಅಭಿವೃದ್ಧಿಗೆ ಹಣ ಸಿಕ್ತಾ ಇಲ್ಲ. ಅಲ್ಲೇ ಹೊಡೆದಾಟ ಶುರುವಾಗಿದೆ ಎಂದು ಹೇಳಿದ್ದಾರೆ.
ತಿಂಗಳಿಗೆ ಒಂದು ಬಾರಿಯಾದ್ರೂ ಆಲ್ ಪಾರ್ಟಿ ಮೀಟಿಂಗ್ ಕರೆಯಿರಿ. ಅನೇಕ ಸಲಹೆ ಸಿಗುತ್ತವೆ. ನೀವು ಆಡಳಿತ ಸರಿಯಾಗಿ ಆಗಲಿ ಅಂತ ಹೇಳ್ತಾ ಇದ್ದೀವಿ. ಹಣಕಾಸಿನ ಪರಿಸ್ಥಿತಿ ಸರಿ ಇಲ್ಲ. ದುಡ್ಡು ಕಡಿಮೆಯಾದ್ರೆ ಬೇರೆ ಸೋರ್ಸ್ ನೋಡೋಣ. ಜನರಿಗೆ ಉಚಿತ ಖಚಿತ ಅಂತ ಕೇಳಿ ಬೇಜಾರಾಗಿದೆ ಎಂದು ತಿಳಿಸಿದ್ದಾರೆ.
ಅನ್ಯರ ಡೊಂಕು ನಾವ್ಯಾಕೆ ತಿದ್ದೋಣ
ಕಾಂಗ್ರೆಸ್ ಮೀಟಿಂಗ್ ವಿಚಾರ ಕುರಿತು ಮಾತನಾಡಿ, ಯಾವ ಹೆಸರಿನಲ್ಲಿ ಹೋಗ್ತಾರೋ ಅದರ ಬಗ್ಗೆ ಚಿಂತೆ ಇಲ್ಲ. ನಾವು ಒಂದು ಸಿದ್ಧಾಂತದಿಂದ ಹೋಗುವವರು. ಅನ್ಯರ ಡೊಂಕು ನಾವ್ಯಾಕೆ ತಿದ್ದೋಣ ಎಂದು ಇಬ್ರಾಹಿಂ ಹೇಳಿದ್ದಾರೆ.