ಪೇಶಾವರ: ಬಾಂಬ್ ಸ್ಫೋಟದಲ್ಲಿ ಕನಿಷ್ಠ 39 ಜನ ಸಾವನ್ನಪ್ಪಿದ್ದು ನೂರಾರು ಜನ ಗಾಯಗೊಂಡಿರುವ ಘಟನೆ ವಾಯುವ್ಯ ಪಾಕಿಸ್ತಾನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಇಸ್ಲಾಮಿಕ್ ಪಕ್ಷದ ರಾಜಕೀಯ ಸಮಾವೇಶದಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕೋಲಾರ: ಲಕ್ಷಾಂತರ ಮೌಲ್ಯ ಟೊಮೊಟೊ ತುಂಬಿದ್ದ ಲಾರಿ ನಾಪತ್ತೆ!
ಜಮಿಯತ್ ಉಲೇಮಾ-ಎ-ಇಸ್ಲಾಂ-ಎಫ್(ಜೆಯುಐ-ಎಫ್)ಪಕ್ಷವನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದ್ದು, ಅಫ್ಘಾನಿಸ್ತಾನ ಗಡಿ ಸಮೀಪವಿರುವ ಖಾರ್ ಪಟ್ಟಣದಲ್ಲಿ ನಡೆದ ಈ ಸಮಾವೇಶದಲ್ಲಿ 400ಕ್ಕೂ ಹೆಚ್ಚು ಸದಸ್ಯರು ಮತ್ತು ಬೆಂಬಲಿಗರು ಭಾಗವಹಿಸಿದ್ದರು.
ಬಾಂಬ್ ಸ್ಪೋಟದಿಂದ ಸಾವಿಗೀಡಾದ 39 ಮೃತ ದೇಹಗಳನ್ನು ಆಸ್ಪತ್ರೆಯಲ್ಲಿರಿಸಿದ್ದು, 123 ಮಂದಿ ಗಾಯಗೊಂಡಿದ್ದಾರೆ. ಆ ಪೈಕಿ 17 ರೋಗಿಗಳು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಎಂದು ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಆರೋಗ್ಯ ಸಚಿವ ರಿಯಾಜ್ ಅನ್ವರ್ ಅವರು (ಎಎಫ್‌ಪಿ)ಗೆ ತಿಳಿಸಿದ್ದಾರೆ. ಪ್ರಾಂತೀಯ ಗವರ್ನರ್ ಹಾಜಿ ಗುಲಾಂ ಅಲಿ ಅವರು ಸಾವಿನ ಸಂಖ್ಯೆಯನ್ನು ದೃಢಪಡಿಸಿದ್ದಾರೆ.