ಬೆಂಗಳೂರು : ಬಿಜೆಪಿ ಅವರು ನಿರುದ್ಯೋಗಿ ಆಗಿದ್ದಾರೆ. ಕೆಲಸ ಇಲ್ಲದೇ ಮೈ ಪರೆಚುಕೊಂಡು ಏನೇನೆಲ್ಲ ಹೇಳ್ತಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ವಿಕಾಸಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿ.ಆರ್ ಪಾಟೀಲ್ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಬಿಜೆಪಿ ಬಳಿ ಇರುವ ಪತ್ರ ನಕಲಿ ಪತ್ರ. ನಾನು ಪತ್ರ ಬರೆದಿದ್ದು ನಿಜ ಅಂತ ಹೇಳಿದ್ದಾರೆ ಎಂದರು.
ಅದರಲ್ಲಿ ಗೊಂದಲ ಏನಿದೆ?
ಶಾಸಕಾಂಗ ಸಭೆ ಕರೆಯಬೇಕು, ಸಿಎಂ ಜೊತೆಗೆ ಕೇಳಿಕೊಂಡಿದ್ದೇನೆ. ಶಾಸಕಾಂಗ ಸಭೆ ಮುಂದೂಡಿದ್ರು. ಹೀಗಾಗಿ, ಬೇಗ ಶಾಸಕಾಂಗ ಪಕ್ಷದ ಸಭೆ ಕರಿರಿ ಅಂತ ಹೇಳಿದ್ದಾರೆ. ಅದರಲ್ಲಿ ಗೊಂದಲ ಏನಿದೆ? ಸಿಎಂ ಹಾಗೂ ಡಿಸಿಎಂ ಅವರು ಹೇಳಿದ್ದು ಬಜೆಟ್ ಇರುವ ಕಾರಣ ವರ್ಗಾವಣೆ ಆಗಿಲ್ಲ. ಅನುದಾನ ಚರ್ಚೆ ಆಗುತ್ತೆ. ಹಿಂದಿನ ಸರ್ಕಾರದಲ್ಲಿ ಬಹಳಷ್ಟು ಕೆಲಸ ಮಾಡಬೇಕು ಎಂದು ಹೇಳಿದರು.
ಇದನ್ನೂ ಓದಿ : ಇದು ಜಿಹಾದಿಗಳ ಸರ್ಕಾರ ಎಂಬುದು ಸ್ಪಷ್ಟವಾಗ್ತಿದೆ : ಅಶ್ವತ್ಥನಾರಾಯಣ
ಸರ್ಕಾರ ಬಂದು ಎರಡೇ ತಿಂಗಳು
ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಅನುದಾನ ಕೇಳಬೇಡಿ ಎಂಬ ಪ್ರಶ್ನೆಗೆ ಉತ್ತರಿಸಿದರ ಅವರು, ಸಾವಿರಾರು ಕೋಟಿ ಕೆಲಸ ಆಗಬೇಕು. ಅವೈಜ್ಞಾನಿಕ ಅನುದಾನ ಹಂಚಿಕೆ ಆಗಿದೆ. ಜನರ ನಿರೀಕ್ಷೆ ಸರ್ಕಾರದಿಂದ ಕೆಲಸ ಆಗುತ್ತೆ ಅಂತ. ಎರಡೇ ತಿಂಗಳು ಆಗಿದೆ ಸರ್ಕಾರ ಬಂದು. ನೂತನವಾಗಿ ಬಂದಿರುವ ಶಾಸಕರಿಗೆ ಭಯ ಇರೋದು ನಿಜ. ಇಂದಿನ ಸಭೆಯಲ್ಲಿ ಎಲ್ಲಾ ಚರ್ಚೆ ಆಗಲಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.