ಚಿಕ್ಕಮಂಳೂರು : ರಾಜ್ಯದಂತ್ಯ ವರುಣಾನ ಅರ್ಭಟ ಜೋರಾಗಿದ್ದು, ಮಳೆಯ ಅರ್ಭಟಕ್ಕೆ ಕೆಲ ಸಾವುಗಳು ಮತ್ತು ಅನಾಹುತಗಳು ಸೃಷ್ಟಿಯಾಗಿವೆ. ಮಳೆಯು ಹೆಚ್ಚಾಗಿ ಸುರಿಯುತ್ತಿರುವ ಹಿನ್ನೇಲೆ ದಕ್ಷಿಣ ಕನ್ನಡ ಮತ್ತು ಚಿಕ್ಕಮಂಗಳೂರು ಜಿಲ್ಲೆಗೆ ಸಂಪರ್ಕಿಸುವ ಚಾರ್ಮಾಡಿ ಘಾಟ್ ನಲ್ಲಿ ಮಣ್ಣು ಕುಸಿತ.
ಕೆಲದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಚಿಕ್ಕಮಂಗಳೂರಿನ ಜಿಲ್ಲೆಯ ಚಾರ್ಮಾಡಿ ಘಾಟ್ ನಲ್ಲಿ ಹಾಲಿನ ನೋರೆಯಂತೆ ಉಕ್ಕಿ ಹರಿಯುತ್ತಿರುವ ಸಣ್ಣ ಜಲಪಾತಗಳು. ಅದರ ಬೆನ್ನಲ್ಲೇ ಮಳೆಯ ಅಬ್ಬರಕ್ಕೆ ನೀರಿನ ಪ್ರಮಾಣ ಜಾಸ್ತಿಯಾಗಿದ್ದು ಘಾಟ್ ನಲ್ಲಿ ಮಣ್ಣು ಕುಸಿದು ಹೋಗಿದೆ.
ಇದನ್ನು ಓದಿ : ಪಂಚಾಯತ್ ಸದಸ್ಯನಿಂದ ಮಾನಸಿಕ ಕಿರುಕುಳ ರಾಜೀನಾಮೆ ಕೊಟ್ಟ ಸಿಬ್ಬಂದಿ
ಮತ್ತೇ ಮಣ್ಣು ಕುಸಿಯುವ ಭೀತಿಯಲ್ಲಿ ಚಾರ್ಮಾಡಿ ಘಾಟ್
ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕಮಂಗಳೂರು ಜಿಲ್ಲೆಗೆ ಸಂಪರ್ಕಿಸುವ ಘಾಟ್ ಆಗಿದ್ದು, ಆಲೇಖಾನ್ ಹಾಗೂ ಬಿದ್ರುತಳ ಮಧ್ಯದಲ್ಲಿ ಚಾರ್ಮಾಡಿ ಘಾಟ್ ನ ಮಣ್ಣು ಕುಸಿತದಿಂದ ರಸ್ತೆಗೆ ಸಂಪೂರ್ಣ ಅಡ್ಡಿಯಾಗಿ ಬಿದ್ದಿರುವ ಮಣ್ಣು. ಅದರಿಂದ ಮತ್ತೆ ಮಣ್ಣು ಕುಸಿಯುವ ಭೀತಿಯಲ್ಲಿರುವ ಚಾರ್ಮಾಡಿ ಘಾಟ್.