ರಾಮನಗರ : ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಜಿಲ್ಲೆಯಲ್ಲಿ ಲಂಚ ಇಲ್ಲದೆ ಯಾವುದೇ ಕೆಲಸ ನಡೆಯುವುದಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು, ಡಿಸಿಎಂ ತವರು ಜಿಲ್ಲೆ ರಾಮನಗರದಲ್ಲಿ ಕೆಲಸ ಮಾಡಲು ಕೊಡಬೇಕು ಲಂಚ! ಲಂಚ ಮುಕ್ತ ಸರ್ಕಾರ ಎಂದವರ ಜಿಲ್ಲೆಯಲ್ಲೇ ಲಂಚಾವತಾರ ತಾಂಡವ ಆಡುತ್ತಿದೆ.
ಮಾಗಡಿಯ ತಾಲೂಕು ಕಚೇರಿಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಪೌತಿ ಖಾತೆ ಮಾಡಲು ಮಲ್ಲಸಂದ್ರ ವೃತ್ತದ ಗ್ರಾಮ ಲೆಕ್ಕಿಗ ರಮೇಶ್ ಎಂಬುವವರು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಲಂಚ ಕೊಟ್ರೆ ದಾಖಲಾತಿಯೇ ಬೇಡ ಎಂದು ಹೇಳಿದ್ದಾರೆ.
ಇದನ್ನು ಓದಿ : ರಾಹುಲ್ ಗಾಂಧಿ ಸಂಸದರೇ ಅಲ್ಲ : ಆರ್. ಅಶೋಕ್
30 ಸಾವಿರ ಲಂಚಕ್ಕೆ ಬೇಡಿಕೆ
ಪೌತಿ ಖಾತೆ ಮಾಡಲು ಗ್ರಾಮ ಲೆಕ್ಕಿಗ ರಮೇಶ್ 30 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನಿನ್ನೆ ರೈತನಿಂದ 5 ಸಾವಿರ ರೂಪಾಯಿ ಹಣವನ್ನೂ ಪಡೆದಿದ್ದರು. ಗ್ರಾಮ ಲೆಕ್ಕಿಗನ ಲಂಚಾವತಾರ ಇದೀಗ ಮೊಬೈಲ್ ನಲ್ಲಿ ಸೆರೆಯಾಗಿದೆ.
10 ಸಾವಿರ ಲಂಚ ಸ್ವೀಕಾರ
ಕೆಲ ದಾಖಲಾತಿ ಇಲ್ಲದಿದ್ರೂ ಅಡ್ಜಸ್ಟ್ ಮಾಡ್ತೀನಿ ಎಂದು ರಮೇಶ್ ಹಣ ಪಡೆದಿದ್ದಾರೆ. ಈಗಾಗಲೇ ರೈತನಿಂದ 10 ಸಾವಿರ ಹಣ ಪಡೆದಿದ್ದಾರೆ. ರಮೇಶ್ ಅವರು ಕಳೆದ 6 ವರ್ಷಗಳಿಂದ ಮಾಗಡಿ ತಾಲೂಕಿನಲ್ಲೇ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.