Friday, November 22, 2024

ಐಎಎಸ್ ಅಧಿಕಾರಿಗಳ ಬಳಕೆ ಬೇಕಿರಲಿಲ್ಲ : ಟಿ.ಬಿ ಜಯಚಂದ್ರ

ಬೆಂಗಳೂರು : ಮಹಾಘಟಬಂಧನ್ ಸಭೆಗೆ ಬಂದ ನಾಯಕರ ಆತಿಥ್ಯಕ್ಕೆ ರಾಜ್ಯದ ಐಎಎಸ್ ಅಧಿಕಾರಿಗಳ ಬಳಕೆ ಬೇಕಿರಲಿಲ್ಲ ಎಂದು ಮಾಜಿ ಸಚಿವ ಟಿ.ಬಿ ಜಯಚಂದ್ರ ಹೇಳಿದರು.

ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಎಎಸ್ ಅಧಿಕಾರಿಗಳನ್ನು ನಿಯೋಜನೆ ಮಾಡಿ, ಬಂದಿರೋ ನಾಯಕರುಗಳಿಗೆ ಅಧಿಕಾರಿಗಳ ಬಳಕೆ ಮಾಡಿ ರಕ್ಷಣೆ ಕೊಡೋದು ಕರ್ನಾಟಕ ಸರ್ಕಾರಕ್ಕೆ ಅವಶ್ಯಕತೆ ಇಲ್ಲ ಎಂದರು.

ಅಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೋಗಿದ್ದಾರೆ, ಸಿಎಂ ಸಿದ್ದರಾಮಯ್ಯ ಹೋಗಿರಬಹುದು. ಡಿಕೆಶಿ ಅವರ ಸ್ಟಾಫ್ ಬಿಟ್ಟು, ಉಳಿದ ಅಧಿಕಾರಿಗಳು ಹೋಗುವ ಅವಶ್ಯಕತೆ ಇಲ್ಲ. ನಾವ್ಯಾರು ಹೋಗಿರಲಿಲ್ಲ ಅಂದ ಮೇಲೆ, ಅಧಿಕಾರಿಗಳೂ ಹೋಗುವ ಅವಶ್ಯಕತೆ ಇರಲಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ : ಇವ್ರು ಮಾಡ್ತಿರೋದು ರಾಜಕೀಯವೋ? ರಾಜ್ಯದ ಅಭಿವೃದ್ಧಿಯೋ? : ಕುಮಾರಸ್ವಾಮಿ ಕಿಡಿ

ಬಿಜೆಪಿ, ಜೆಡಿಎಸ್‌ ಅವ್ರಿಗೆ ಭಯ

ಯಾವುದೋ ಕಾರಣಕ್ಕೆ ಹೋಗಿರಬಹುದು. ಇದನ್ನು ಸಾರ್ವಜನಿಕವಾಗಿ ಆರೋಪ ಮಾಡೋದು ಸರಿಯಲ್ಲ. ಬೆಂಗಳೂರಿನಲ್ಲಿ ರಾಷ್ಟ್ರ ಮಟ್ಟದಲ್ಲಿ ನಡೆಯುವ ಸಭೆ ಯಶಸ್ವಿ ಆಗುತ್ತೆ. ಕಾಂಗ್ರೆಸ್ ಇಬ್ಬಾಗ ಆದಾಗ ಬೆಂಗಳೂರಿನಲ್ಲಿ ಸಭೆ ಮಾಡಿ ಒಂದುಗೂಡಿಸಲಾಗಿತ್ತು. ಮತ್ತೆ ಯಶಸ್ವಿಯಾದ್ರೆ ಕಷ್ಟ ಅನ್ನೋದು ಬಿಜೆಪಿ, ಜೆಡಿಎಸ್‌ ಅವರಿಗೆ ಭಯ ಎಂದು ಕುಟುಕಿದರು.

RELATED ARTICLES

Related Articles

TRENDING ARTICLES