Sunday, January 12, 2025

ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ಬೇಸಿಗೆ ಡರ್ಬಿ ಕ್ರೇಜ್

ಬೆಂಗಳೂರು : ರೇಸ್ ಪ್ರಿಯರು ಇಷ್ಟು ದಿನ ಬಕ ಪಕ್ಷಿಗಳ ಹಾಗೆ ಕಾದು ಕುಳಿತಿದ್ದ ಬೆಂಗಳೂರು ಬೇಸಿಗೆ ಡರ್ಬಿ ಇಂದು ಬೆಂಗಳೂರು ಟರ್ಫ್ ಕ್ಲಬ್ ನಲ್ಲಿ ನಡೆದಿದೆ.

ಕ್ರಿಕೆಟ್ ಪ್ರಿಯರಿಗೆ ಐಪಿಎಲ್ ಬಂತು ಅಂದ್ರೆ ಎಲ್ಲಿಲ್ಲದ ಕ್ರೇಜ್ ಶುರುವಾಗುತ್ತೆ. ಹಾಗೆಯೇ ರೇಸ್ ಪ್ರಿಯರಿಗೆ ವರ್ಷಕ್ಕೆ ಒಮ್ಮೆ ಬರುವ ಬೇಸಿಗೆ ಡರ್ಬಿ ಅಂದ್ರೆ ಸಕ್ಕತ್ ಕ್ರೇಜ್. ಇಂದು ಬೆಂಗಳೂರು ಟರ್ಫ್ ಕ್ಲಬ್ ನಲ್ಲಿ ಬೇಸಿಗೆ ಡರ್ಬಿ ನಡೆದಿದ್ದು, ಸಾವಿರಾರು ಜನ ಬೇಸಿಗೆ ಡರ್ಬಿ ನೋಡಲು ಮುಗಿಬಿದ್ದರು.

ಇನ್ನು ಈ  ಡರ್ಬಿ ಎಂಟು ರೌಂಡ್ ಗಳನ್ನ ಒಳಗೊಂಡಿದ್ದು, 11 ಕುದುರೆಗಳು ಪಾಲ್ಗೊಂಡಿದ್ದವು. ಡೆಸ್ಟ್ರಾಯರ್, ಎಲ್ಪೇನಾರ್, ಇಂಪೀರಿಯಲ್ ಜೆಶ್ಚರ್, ರೂಲಿಂಗ್ ಡೈನಾಸ್ಟಿ, ಸಿಂಥೆಸಿಸ್, ದಿ ಗಾಡ್ ಫಾದರ್, ಆಸ್ಪೀಶಿಯಸ್ ಕ್ವೀನ್, ಜಮಾರಿ, ಡಬಲ್ ಪವರ್, ವೈ ಕೇಕಿ ಕುದುರೆಗಳು ಭಾಗವಹಿಸಿದ್ದವು.

ಇದನ್ನೂ ಓದಿ : ವಿದೇಶದಲ್ಲಿ ವಿಶೇಷ ದಾಖಲೆ ಬರೆದ ಟೀಂ ಇಂಡಿಯಾ

ಜಾಕಿ ಸಿ ಉಮೇಶ್ ಮೊದಲ ಸ್ಥಾನ

ರೇಸ್ ಪ್ರಿಯರೆಲ್ಲರೂ ಸಿಂಥೆಸಿಸ್ ಕುದುರೆ ಗೆಲ್ಲುವ ನಿರೀಕ್ಷೆಯಲ್ಲಿದ್ದರು. ಫಿಲಿಕ್ಸ್ ಚಾಂಪಿಯನ್ಷಿಪ್ ರೋಚಕ ಜಯ ಗಳಿಸಿದ್ದ ಜಮಾರಿ ಕುದುರೆ ಮತ್ತು ಅದೇ ರೇಸ್ ನಲ್ಲಿ ಮೂರನೇ ಸ್ಥಾನ ಪಡೆದಿದ್ದ ವೈಕಿ ಕುದುರೆಗೂ ಬಹಳ ಪೈಪೋಟಿ ಇತ್ತು. 6ನೇ ರೇಸ್ ಆದ ಬೆಂಗಳೂರು  ಸಮ್ಮರ್ ಡರ್ಬಿಯಲ್ಲಿ ಜಾಕೀ ಸೂರಜ್ ನರೇಡು ರವರ ಸಿಂಥೆಸಿಸ್ ಕುದುರೆಯನ್ನು ಜಾಮಾರಿ ಕುದುರೆ ಹಿಂದೆ ಹಾಕುವ ಮೂಲಕ ಜಯ ಸಾಧಿಸಿದೆ.

ಈ ಜಮಾರಿ ಕುದುರೆಯ ಜಾಕಿ ಸಿ ಉಮೇಶ್ ಮೊದಲ ಸ್ಥಾನ ಪಡೆದಿದ್ದಾರೆ. ಜಮಾರಿ  ಕುದುರೆಗೆ ಮೊದಲ ಸ್ಥಾನ ಬಂದಿದ್ದು, ಆಸ್ಪೇಷಿಯಸ್ ಕ್ವೀನ್ ಗೆ ಎರಡನೇ ಸ್ಥಾನ ಮತ್ತು ಬಹು ನಿರೀಕ್ಷೆಯಲ್ಲಿದ್ದ ಸಿಂಥೆಸಿಸ್ ಕುದುರೆಗೆ 7ನೇ ಸ್ಥಾನ ಬಂದಿದೆ.

RELATED ARTICLES

Related Articles

TRENDING ARTICLES