ಕಲಬುರಗಿ : ಡಿಪೋ ಮ್ಯಾನೇಜರ್ ತನಗೆ ವಿನಾಕಾರಣ ಕಿರುಕುಳ ಕೊಡ್ತಿದ್ದ ಹಿನ್ನೇಲೆ KSRTC ಚಾಲಕ ಆತ್ಮಹತ್ಯೆಗೆ ಯತ್ನ.
ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ksrtc ಸಿಬ್ಬಂದಿ, ಕಲಬುರಗಿ ನಗರದ ಡಿಪೋ ನಂಬರ್ 2 ರಲ್ಲಿ ಘಟನೆ ಇಂದು ನೆಡೆದಿದೆ. ನನ್ನ ಮೇಲೆ ವಿನಾ ಕಾರಣ ಒತ್ತಡ ಏರುತ್ತಿದ್ದಾರೆ ಎಂದು ಡಿಪೋದ ಸಿಬ್ಬಂದಿಗಳ ಹತ್ತಿರ ನೋವನ್ನು ಹೇಳಿಕೊಂಡರು.
ಇದನ್ನು ಓದಿ : ಪೆನ್ ಡ್ರೈವ್ ರಹಸ್ಯ ರಿಲೀಸ್ ಗೆ ಡೇಟ್ ಫಿಕ್ಸ್ ಮಾಡಿದ ಕುಮಾರಸ್ವಾಮಿ!
ಹೌದು, ಕಲಬುರಗಿಯಲ್ಲಿ ksrtc ಚಾಲಕ ಮತ್ತು ನಿರ್ವಾಹಕನಾಗಿ ಕೆಲಸ ಮಾಡುತ್ತಿರೋ ಬೀರಣ್ಣಾ ಎಂಬುವವರಿಗೆ ಡಿಪೋ ಮ್ಯಾನೇಜರ್ ತನಗೆ ವಿನಾಕಾರಣ ಕಿರುಕುಳ ನೀಡ್ತಿದ್ದಾರೆ ಹಾಗೂ ಸರಿಯಾಗಿ ಡ್ಯೂಟಿ ಮಾಡ್ತಿಲ್ಲ ಅಂತಾ ಪ್ರತಿದಿನ ಸುಳ್ಳು ಆರೋಪ ಮಾಡಿ ಕಾಟ ಕೊಡುತ್ತಿದ್ದಾರೆ ಎಂದು ನೋವನ್ನು ವ್ಯಕ್ತ ಪಡಿಸಿದ್ದಾರೆ,ಹಾಗೆಯೇ ಅವರಿಗೆ ಹೆಚ್ಚುವರಿಯಾಗಿ ಕೆಲಸದ ಒತ್ತಡವನ್ನು ಹಾಕುತ್ತಿದ್ದಾರೆ ಅಂತ ಡಿಪೋ ಮ್ಯಾನೇಜರ್ ಮೇಲೆ ಆರೋಪವನ್ನು ಮಾಡಿ,
ಡಿಪೋದಲ್ಲಿಯೇ ಡಿಸೇಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಬೀರಣ್ಣಾ
ಆದರೆ ಡಿಸೈಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಮುಂದಾಗುತ್ತಿದ್ದಂತೆ ಅಲ್ಲೇ ನಿಂತಿದ್ದ ಸಿಬ್ಬಂದಿಗಳು ಬೀರಣ್ಣನನ್ನು ತಡೆ ಹಿಡಿದು ಅವರ ಪ್ರಾಣವನ್ನು ಉಳಿಸಿದ್ದಾರೆ. ಆದ್ದರಿಂದ ಸದ್ಯ ಯಾವುದೇ ಅನಾಹುತಗಳು ನೆಡೆಯಲಿಲ್ಲ. ಬಳಿಕ ಘಟನೆ ನೆಡೆದ ಸ್ಥಳಕ್ಕೆ ಬೇಟಿ ನೀಡಿದ ಅಶೋಕ ನಗರ ಠಾಣೆಯ ಪೋಲಿಸರು.