ಹಾಸನ : ದೇವಸ್ಥಾನದ ಜಾಗ ಯಾರ ಒಬ್ಬರ ಸ್ವತ್ತಲ್ಲ, ಆದರೆ ದೇವಾಲಯದ ಜಾಗವನ್ನು ತನ್ನ ಹೆಸರಿಗೆ ಬರೆಸಿಕೊಳ್ಳಲು ಮುಂದಾದ ಪೂಜಾರಿ.
ಶನೇಶ್ವರಸ್ವಾಮಿ ದೇವಾಲಯದ ಅರ್ಚಕ ಸಂಜೀವಾಚಾರಿಯಿಂದ ಕೃತ್ಯ.
ಆಲೂರು ತಾಲೂಕಿನ ಕಾಮತಿ ಗ್ರಾಮದಲ್ಲಿ ದೇವಾಲಯದ ಜಾಗವನ್ನು ತನ್ನ ಹೆಸರಿಗೆ ಮಾಡಿಕೊಳ್ಳುವಂತೆ ನಕಲಿ ದಾಖಲೆಗಳನ್ನು ಸೃಷ್ಟಿಮಾಡಿ ಕೋರ್ಟ್ ಮೆಟ್ಟಿಲೇರಿದ ಅರ್ಚಕ ಸಂಜೀವಾಚಾರಿ.
ಇದನ್ನು ಓದಿ : ಕಿಚ್ಚನ ಪರ ವೀರಕಪುತ್ರ ಶ್ರೀನಿವಾಸ್ ಬ್ಯಾಟಿಂಗ್ : ಕಳಚಿದ ಸೂರಪ್ಪ ಬಾಬು ಮುಖವಾಡ
ಗ್ರಾಮದಲ್ಲಿ ಸುಮಾರು 17 ವರ್ಷಗಳಿಂದಲೂ ಉದ್ಭವವಾಗಿರುವ ಶನೇಶ್ವರ ದೇವಾಲವೊಂದು ಇದ್ದು, ಈ ದೇವಾಲಯದ ಪೂಜೆ ಮಾಡಲು ಗ್ರಾಮಸ್ಥರೇ ಅರ್ಚಕ ಸಂಜೀವಾಚಾರಿಯನ್ನು ನೇಮಿಸಿಕೊಂಡಿದ್ದರು. ಆದರೇ ಗ್ರಾಮಸ್ಥರಿಗೆ ತಿಳಿಯದಂತೆ ಪೂಜಾರಿ ಗ್ರಾಮದ ಸರ್ವೇ ನಂಬರ್ 9ರಲ್ಲಿ ಸರ್ಕಾರದ ಗೋಮಾಳ ಜಾಗವಿದ್ದು, ಅದನ್ನು ತನ್ನ ಹೆಸರಿಗೆ ಮಾಡಿಸಿಕೊಳ್ಳಲು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು,
ಕೋರ್ಟ್ ಮೆಟ್ಟಿಲೇರಿದ್ದಾನೆ ಎಂದು ಗ್ರಾಮಸ್ಥರು ಆಕ್ರೋಶಕ್ಕೆ ಒಳಗಾಗಿದ್ದು, ಗ್ರಾಮಾಸ್ಥರು ದೇವಾಲಯದ ಜಾಗ ಯಾರೊಬ್ಬರ ಸ್ವತ್ತಲ್ಲ, ಸಾರ್ವಜನಿಕರ ಸ್ವತ್ತು ಅಂತಾ ಪೂಜಾರಿಯ ಮೇಲೆ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದಾರೆ.