ಬೆಂಗಳೂರು : ತರಕಾರಿ ದರ ಏರಿಕೆಯಿಂದ ಸಿಲಿಕಾನ್ ಸಿಟಿ ಮಂದಿ ಸೇರಿದಂತೆ ರಾಜ್ಯದ ಜನ ಕಂಗಾಲಾಗಿದ್ದಾರೆ. ಅದರಲ್ಲೂ ಟೊಮೆಟೊ, ಮೆಣಸಿನಕಾಯಿ ಬೆಲೆ ಕೇಳಿ ಜನ ತತ್ತರಿಸಿದ್ದಾರೆ.
ಬೇಸಿಗೆಯ ಬಿಸಿಲು ಹಾಗೂ ಮುಂಗಾರು ಮಳೆ ತಡವಾಗಿದ್ದರಿಂದ ಮೆಣಸಿನಕಾಯಿ ಬೆಲೆಯಲ್ಲಿ ಸಾಕಷ್ಟು ಏರಿಕೆಯಾಗಿದೆ. ಕಳೆದ ತಿಂಗಳು 60 ರೂ.ಗಳ ಆಸುಪಾಸಿನಲ್ಲಿದ್ದ ಹಸಿರು ಮೆಣಸಿನಕಾಯಿ ಈಗ ಪ್ರತಿ ಕಿಲೋಗೆ 170 ರೂ.ಗೆ ಏರಿಕೆ ಕಂಡಿದೆ.
ಇದನ್ನು ಓದಿ : ಟ್ರೋಲ್ ಮಾಡೋರ ಬಗ್ಗೆ ತೆಲೆಕೆಡಿಸಕೊಳ್ಳಬೇಡಿ ಪ್ರದೀಪ್ : ಯು.ಟಿ ಖಾದರ್ ಕಿವಿಮಾತು
ಇದರ ಜೊತೆಗೆ ರಾಜ್ಯ ಸೇರಿ ದೇಶಾದ್ಯಂತ ಟೊಮೆಟೊ ಬೆಲೆ ಏರಿಕೆಯೂ ಮುಂದುವರಿದಿದೆ. ಶುಂಠಿ ಹಾಗೂ ಹೂ ಕೋಸಿನ ಬೆಲೆಯೂ ಹೆಚ್ಚಾಗಿದ್ದು, ಇದರಿಂದ ಗೃಹಿಣಿಯರು ಕಂಗಾಲಾಗಿದ್ದಾರೆ. ಇನ್ನೂ ಒಂದರಿಂದ ಎರಡು ತಿಂಗಳ ಕಾಲ ಟೊಮೆಟೊ ಬೆಲೆ ಕಡಿಮೆ ಆಗುವ ಲಕ್ಷಣಗಳು ಕಂಡುಬರುತ್ತಿಲ್ಲ.
ಹೊಸ ಬೆಳೆ ಬಂದ ಮೇಲೆ ಮಾತ್ರ ಟೊಮೆಟೊ ಬೆಲೆ ಕಡಿಮೆಯಾಗುವ ಸಂಭವವಿದೆ. ಈ ಹೊಸ ಬೆಳೆ ಬರಬೇಕಾದ್ರೆ ಒಂದರಿಂದ ಎರಡು ತಿಂಗಳು ಬೇಕು ಎನ್ನುತ್ತಾರೆ ವರ್ತಕರು.